ನಾಗರಪಂಚಮಿ ಉತ್ಸವ

 

ಬೆಂಗಳೂರು,ಆ.24-ಉತ್ತರ ಕರ್ನಾಟಕ ಜನಪರ ವೇದಿಕೆ ವತಿಯಿಂದ ಇದೇ 26ರಂದು ನಾಗರಪಂಚಮಿ ಉತ್ಸವ ಕಾರ್ಯಕ್ರಮವನ್ನು 8ನೇ ಮೈಲಿಯ ಪಾಟಿದಾರ ಸಮಾಜ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ಎಂ.ಜಿ.ಮಠ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ವೇದಿಕೆ ಅಂದುಕೊಂಡಂತೆ ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ, ವೈಭವಯುತವಾಗಿ ಪೂರೈಸಬೇಕೆಂದು ಯೋಚಿಸಿದ್ದೇವೆ. ಆದರೆ ಇಂದು ಕೊಡುಗು ಸಂತ್ರಸ್ತರಿಗೆ ಧನ ಸಹಾಯ ಮಾಡುವ ಉದ್ದೇಶದಿಂದ ನಮ್ಮ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಿ ಉಳಿದ ಹಣವನ್ನು ನೆರೆ ಸಂತ್ರಸ್ತರಿಗೆ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಮ್ಯೂಸಿಕಲ್ ಚೇರ್, ರಂಗೋಲಿ ಸ್ಪರ್ಧೆ, ಗವಾಯಿಗಳ ಗಾನಸುಧೆ, ಡ್ರಾಮ ಜ್ಯೂನಿಯರ್ಸ್ ಖ್ಯಾತಿಯ ಅಮೋಘ ಕೃಷ್ಣ, ಸರಿಗಮಪ ವಿನರ್ ಸುನಿಲ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಿರುವುದಾಗಿ ತಿಳಿಸಿದರು. ಶ್ರೀ ಬೊಳೋಡಿ ಬಸವೇಶ್ವರ ಶಿವಯೋಗಿ ಸಂಸ್ಥಾನದ ಬೃಹನ್ಮಠದ ಹೆಬ್ಬಾಳದ ಪರಮಪೂಜ್ಯ ಶ್ರೀ ಷ.ಬ್ಬ.ನಾಗಭೂಷಣ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿ ದಿವ್ಯಸಾನಿಧ್ಯ ವಹಿಸಲಿದ್ದಾರೆ.
ತೋಟಗಾರಿಕೆ ಸಚಿವ ಮನಗೂಳಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವ ಪ್ರಿಯಾಂಕ ಖರ್ಗೆ, ಉಪಮಹಾಪೌರರಾದ ಪದ್ಮಾವತಿ ನರಸಿಂಹಮೂರ್ತಿ, ಶಾಸಕ ಎಂ.ವೈ.ಪಾಟೀಲ್, ಅಜಯ್‍ಸಿಂಗ್, ಐಪಿಎಸ್ ರವಿ ಡಿ. ಚನ್ನಣ್ಣ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ