ಬೆಂಗಳೂರು, ಆ.24- ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿಯಲ್ಲಿ ಅತ್ಯಂತ ಹಿಂದುಳಿದ ಗ್ರಾಮವಾದ ಬಾಗಲಕೋಟೆಯ ಸಿದ್ದಾಪುರ ಗ್ರಾಮದಲ್ಲಿ ಸೌರ ಶಕ್ತಿ ವಿದ್ಯುತ್ ಸಂಪರ್ಕ ಕಲ್ಪಿಸಿ ಸ್ಥಳೀಯರ ಬಾಳಲ್ಲಿ ಇವೊಲ್ಯೂಟ್ ಗ್ರೂಪ್ ಹೊಸ ಬೆಳಕು ಮೂಡಿಸಿದೆ.
ಗ್ರಾಮ ಪಂಚಾಯ್ತಿಯನ್ನು ಸಂಪರ್ಕಿಸಿ ಸ್ಥಳೀಯರನ್ನು ಕಾಡುತ್ತಿದ್ದ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸೌರ ವಿದ್ಯುತ್ ಯೋಜನೆಯನ್ನು ಅಳವಡಿಸಲಾಗಿದ್ದು , ಈಗ ಕನಿಷ್ಠ 12 ಗಂಟೆಗಳ ಕಾಲ ಯಾವುದೇ ಅಡಚಣೆ ಇಲ್ಲದೆ ವಿದ್ಯುತ್ ಇರುತ್ತದೆ. ಮತ್ತು ಅವರ ಕೆಲಸ ಕಾರ್ಯಗಳಿಗೂ ಅನುಕೂಲವಾಗುತ್ತಿದೆ.
ಈ ಕುರಿತು ಮಾತನಾಡಿದ ಇವೊಲ್ಯೂಟ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್‍ನ ಸಿಇಒ ಪರಾಗ್ ಮೆಹಾ ್ತ ಮಾತನಾಡಿ, ಸಮಗ್ರ ಭವಿಷ್ಯದ ಬಗ್ಗೆ ಗಮನ ನೆಟ್ಟು ಕೆಲಸ ಮಾಡುವುದು ನಮ್ಮ ಗುರಿ. ಇಲ್ಲಿ ನಾವು ಮರುಬಳಕೆ ಮಾಡಬಹುದಾದ ಇಂಧನವನ್ನು ಬಳಕೆ ಮಾಡಿದ್ದೇವೆ. ಅಲ್ಲದೇ, ಕುಟುಂಬಗಳಲ್ಲಿ ಖುಷಿಯನ್ನು ಮರಳಿ ತಂದಿದ್ದೇವೆ. ಈ ಕುಟುಂಬಗಳು ಈಗ ತಮ್ಮ ಕೆಲಸದ ಅವಯನ್ನು ವಿಸ್ತರಿಸಬಹುದಾಗಿದೆ. ಇದರ ಮೂಲಕ ಹೆಚ್ಚುವರಿ ಆದಾಯ ಕೂಡಾ ಸಂಗ್ರಹಿಸಬಹುದಾಗಿದೆ ಎಂದರು.