ಜಕಾರ್ತ: ಏಷ್ಯನ್ ಗೇಮ್ಸ್ನಲ್ಲಿ ಭಾರತ ಕೀಡಾಪಟುಗಳು ಉತ್ತಮ ಪದ್ರರ್ಶನ ನೀಡುತ್ತಿದ್ದಾರೆ. 2018 ರ ಏಷ್ಯನ್ ಗೇಮ್ಸ್ನಲ್ಲಿ ಭಾರತ ಇದುವರೆಗೂ 15 ಪದಕಗಳೊಂದಿಗೆ 7ನೇ ಸ್ಥಾನ ಅಲಂಕರಿಸಿದ್ದಾರೆ.
ವೂಶೂ ಸ್ಪರ್ಧೆಯಲ್ಲಿ ಭಾರತೀಯ ಕ್ರೀಡಾಪಟುಗಳು ನಾಲ್ಕು ಕಂಚಿನ ಪದಕ ಗೆದ್ದಿದ್ದು, ಒಟ್ಟಾರೆ 4 ಚಿನ್ನದ ಪದಕ, 3 ಬೆಳ್ಳಿ ಪದಕ, ಹಾಗೂ 8 ಕಂಚಿನ ಪದಕ ಸೇರಿದಂತೆ ಒಟ್ಟಾರೆ 15 ಪದಕಗಳನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ಯಾಡ್ಮಿಂಟನ್ ನಲ್ಲಿ ಒಂದಿಷ್ಟು ಪದಕಗಳು ಬರುವ ಸಾಧ್ಯತೆ ಇದೆ. ಅಂಕಿತ ರೈನಾ ರೋಹನ್ ಬೋಪಣ್ಣ, ದಿವಿಜ್ ಶರಣ್ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.
ಮೋದಿ ಅಭಿನಂದನೆ: ವೂಶೂದಲ್ಲಿ ಭಾರತಕ್ಕೆ ನಾಲ್ಕು ಕಂಚು ಗೆದ್ದು ಕೊಟ್ಟ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.