ನಾಟಿಂಗ್ ಹ್ಯಾಮ್: ಇಂಗ್ಲೆಂಡ್ ತಂಡ ವೇಗಿ ಸ್ಟುವರ್ಟ್ ಬ್ರಾಡ್ ಗೂ ಟೀಂ ಇಂಡಿಯಾ ಆಟಗಾರರಿಗೂ ಆಗಿ ಬರುವುದಿಲ್ಲ. ಟೀಂ ಇಂಡಿಯಾ ಆಟಗಾರರನ್ನು ಕೆಣಕಿ ಬ್ರಾಡ್ ಹಲವು ಬಾರಿ ಟೀಕೆಗೆ ಗುರಿಯಾಗಿದ್ದಾರೆ.
ಭಾರತವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಟೀಂ ಇಂಡಿಯಾದ ಯುವ ಬ್ಯಾಟ್ಸ್ ಮನ್, ಕೀಪರ್ ರಿಷಬ್ ಪಂತ್ ರನ್ನು ಅಶ್ಲೀಲ ಶಬ್ದಗಳಿಂದ ನಿಂದಿಸಿ ಇದೀಗ ಟ್ವೀಟರಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಇದೇ ವೇಳೆ ಐಸಿಸಿ ಸಹ ಕೋಡ್ ಆಫ್ 2.1.7 ನಿಮಯ ಉಲ್ಲಂಘಿಸಿದ ಬ್ರಾಡ್ ಗೆ ಶಿಕ್ಷೆ ವಿಧಿಸಿದೆ. ಪಂದ್ಯದ ಶೇಖಡಾ 15ರಷ್ಟು ಶುಲ್ಕವನ್ನು ದಂಡವಾಗಿ ಪಾವತಿಸುವಂತೆ ಐಸಿಸಿ ಹೇಳಿದೆ.
2007ರ ಪ್ರಥಮ ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಇಂಗ್ಲೆಂಡ್ ನ ವೇಗಿ ಸ್ಟುವರ್ಟ್ ಬ್ರಾಡ್ ಗೆ ಒಂದೇ ಓವರ್ ನಲ್ಲಿ ಸತತ 6 ಸಿಕ್ಸರ್ ಬಾರಿಸಿದ್ದರು. ಆ್ಯಂಡ್ರೂ ಫ್ಲಿಂಟಾಫ್ ಮತ್ತು ಯುವಿ ನಡುವಿನ ಜಗಳದಲ್ಲಿ ಬ್ರಾಡ್ ಬಲಿಯಾಗಿದ್ದರು. ಫ್ಲಿಂಟಾಫ್ ಮೇಲಿನ ಕೋಪವನ್ನು ಯುವಿ ಬ್ರಾಡ್ ಓವರ್ ನಲ್ಲಿ 6 ಸಿಕ್ಸರ್ ಬಾರಿಸುವ ಮೂಲಕ ಫ್ಲಿಂಟಾಫ್ ಬಾಯಿ ಮುಚ್ಚಿಸಿದ್ದರು.
ಇದೇ ವಿಷಯವನ್ನು ಮುಂದಿಟ್ಟುಕೊಂಡು ಟ್ವೀಟರಿಗರು ಯುವಿ ಕೈಯಲ್ಲಿ ಚಚ್ಚಿಸಿಕೊಂಡಿದ್ದು ಸಾಕಾಗಿಲ್ಲವ. ಮತ್ತೆ ಟೀಂ ಇಂಡಿಯಾ ಆಟಗಾರರನ್ನು ಕೆಣಕುತ್ತಿದ್ದಿಯಾ ಎಂದು ಪ್ರಶ್ನಿಸುತ್ತಿದ್ದಾರೆ.