ನಾಟಿಂಗ್ ಹ್ಯಾಮ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ವಿರುದ್ಧ ತಂಡದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಕೆಂಡಕಾರಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಳೆದ 38 ಟೆಸ್ಟ್ ಪಂದ್ಯಗಳಲ್ಲಿ 38 ಬದಲಾವಣೆಗಳನ್ನು ಮಾಡಲಾಗಿದ್ದು ಇದು ಯಾಕೋ ಅತಿಯಾಯ್ತು ಎಂದು ಹರ್ಭಜನ್ ಸಿಂಗ್ ಭಾವಿಸಿದರೂ ಕೊಹ್ಲಿ ಪಡೆ ಉತ್ತಮ ಫಲಿತಾಂಶ ನೀಡುವವರೆಗೂ ಇದು ಅಪ್ರಸ್ತುತವಾಗಿರುತ್ತದೆ ಎಂದು ಹೇಳಿದ್ದಾರೆ.
ಟೆಸ್ಟ್ ನಲ್ಲಿ ಬದಲಾವಣೆಗಳನ್ನು ಮಾಡುವುದು ಸಹಜ. ಆದರೆ ಕೊಹ್ಲಿ ನಾಯಕತ್ವದಲ್ಲಿ ಸ್ವಲ್ಪ ಹೆಚ್ಚಾಯ್ತು. ಪ್ರತಿ ನಾಯಕನೂ ವಿಭಿನ್ನ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇದು ಪ್ರತಿಯೊಂದು ತಂಡದಲ್ಲೂ ಡೈನಾಮಿಕ್ ಬದಲಾವಣೆಯನ್ನು ತರುತ್ತದೆ.
ಟೆಸ್ಟ್ ತಂಡದಲ್ಲಿ ಮಾಡಿದ್ದ ಬದಲಾವಣೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲುವಲ್ಲಿ ಸಹಾಯವಾಗಿತ್ತು. ಅದೇ ರೀತಿಯ ಸ್ಟ್ರಾಟರ್ಜಿ ಇಂಗ್ಲೆಂಡ್ ನೆಲದಲ್ಲೂ ಮಾಡಬೇಕಿದೆ. ನಾಯಕನಿಗೆ ತಮ್ಮ ನಿರ್ಧಾರದಲ್ಲಿ ನಂಬಿಕೆ ಇದ್ದರೆ ಈ ಸಲಹೆಯನ್ನು ನಿರ್ವಹಣ ಮಂಡಳಿಯೂ ಒಪ್ಪಿಕೊಳ್ಳುತ್ತದೆ ಮತ್ತು ಆಟಗಾರರೂ ಅದನ್ನು ಸ್ವೀಕರಿಸುತ್ತಾರೆ. ಆಗ ನಾವು ನೀವು ಯೋಚಿಸುವುದು ಮುಖ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ಒಂದು ಪಂದ್ಯವನ್ನು ಗೆದ್ದಿದ್ದು ಇಂಗ್ಲೆಂಡ್ ಎರಡು ಪಂದ್ಯಗಳನ್ನು ಗೆದ್ದಿದೆ. ಭಾರತ ಟೆಸ್ಟ್ ಸರಣಿ ಗೆಲ್ಲಬೇಕಾದರೆ ಇಳಿದ ಎರಡೂ ಪಂದ್ಯಗಳಲ್ಲಿ ಜಯ ಗಳಿಸಬೇಕಿದೆ.