ವಿಶ್ವದ ಟಾಪ್ 10 ಸಂಭಾವನೆ ಪಡೆದ ಪುರುಷ ನಟರು; ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್ ಕುಮಾರ್, ಸಲ್ಮಾನ್ ಖಾನ್
August 23, 2018VDಮನರಂಜನೆComments Off on ವಿಶ್ವದ ಟಾಪ್ 10 ಸಂಭಾವನೆ ಪಡೆದ ಪುರುಷ ನಟರು; ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್ ಕುಮಾರ್, ಸಲ್ಮಾನ್ ಖಾನ್
Seen By: 169
ಬಾಲಿವುಡ್ ಸೂಪರ್ ಸ್ಟಾರ್ ಗಳಾದ ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ವಿಶ್ವದ ಅತ್ಯಂತ ಹೆಚ್ಚು ಸಂಭಾವನೆ ಪಡೆದ 2018ನೇ ಸಾಲಿನ ಟಾಪ್ 10 ಪುರುಷ ನಟರ ಫೋರ್ಬ್ಸ್ ಮ್ಯಾಗಜಿನ್ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.’ಗೋಲ್ಡ್’ ಚಿತ್ರದ ನಟ ಅಕ್ಷಯ್ ಕುಮಾರ್ 40.5 ಮಿಲಿಯನ್ ಅಮೆರಿಕನ್ ಡಾಲರ್ ರೂಪಾಯಿ ಸಂಭಾವನೆ ಗಳಿಸುವ ಮೂಲಕ 7ನೇ ಸ್ಥಾನದಲ್ಲಿದ್ದರೆ, 38.5 ಮಿಲಿಯನ್ ಅಮೆರಿಕನ್ ಡಾಲರ್ ಗಳಿಸುವ ಮೂಲಕ ಸಲ್ಮಾನ್ ಖಾನ್ 9ನೇ ಸ್ಥಾನದಲ್ಲಿದ್ದಾರೆ.ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಟಾಪ್ 10 ಪುರುಷರ ಪಟ್ಟಿಯಲ್ಲಿ 239 ಡಾಲರ್ ಗಳಿಸುವ ಮೂಲಕ ಜಾರ್ಜ್ ಕ್ಲೂನಿ ಮೊದಲ ಸ್ಥಾನದಲ್ಲಿ, 124 ಮಿಲಿಯನ್ ಗಳಿಸುವ ಮೂಲಕ ದ್ವಾಯ್ನೆ ಜಾನ್ಸನ್ ದ್ವಿತೀಯ ಸ್ಥಾನದಲ್ಲಿ, 81 ಮಿಲಿಯನ್ ಗಳಿಸುವ ಮೂಲಕ ರಾಬರ್ಟ್ ಡೌನಿ ಜ್ಯೂನಿಯರ್ ಮೂರನೇ ಸ್ಥಾನದಲ್ಲಿ, 64.5 ಮಿಲಿಯನ್ ಡಾಲರ್ ಗಳಿಸುವ ಮೂಲಕ ಕ್ರಿಸ್ ಹೆಮ್ಸ್ ವರ್ತ್ ನಾಲ್ಕನೇ ಸ್ಥಾನದಲ್ಲಿ, ಜಾಕಿ ಚಾನ್ 45.5 ಮಿಲಿಯನ್ ಡಾಲರ್ ಗಳಿಸುವ ಮೂಲಕ 5 ನೇ ಸ್ಥಾನದಲ್ಲಿ, ವಿಲ್ ಸ್ಮಿತ್ 6 ಸ್ಥಾನದಲ್ಲಿ 42 ಮಿಲಿಯನ್ ಡಾಲರ್ ಮೂಲಕ 6 ಸ್ಥಾನದಲ್ಲಿದ್ದಾರೆ. 7 ನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್, ಅಡಮ್ ಸ್ಯಾಂಡ್ಲರ್ 8ನೇ ಸ್ಥಾನದಲ್ಲಿದ್ದು 39.5 ಮಿಲಿಯನ್ ಡಾಲರ್ ಗಳಿಸಿದ್ದಾರೆ. ಸಲ್ಮಾನ್ ಖಾನ್ 9ನೇ ಸ್ಥಾನದಲ್ಲಿ ಮತ್ತು 34 ಮಿಲಿಯನ್ ಡಾಲರ್ ಗಳಿಸುವ ಮೂಲಕ ಕ್ರಿಸ್ ಎವನ್ಸ್ 10ನೇ ಸ್ಥಾನ ಗಳಿಸಿದ್ದಾರೆ.ಇದಕ್ಕೂ ಮುನ್ನ ಕಳೆದ ತಿಂಗಳು ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ 2018ನೇ ಸಾಲಿನ ಟಾಪ್ 100 ಅತಿ ಹೆಚ್ಚು ಸಂಭಾವನೆ ಪಡೆದ ಮನರಂಜನೆಗಾರರು ಪಟ್ಟಿಯಲ್ಲಿ ಕೂಡ ಸ್ಥಾನ ಗಳಿಸಿದ್ದರು. ಅದರಲ್ಲಿ ಅಕ್ಷಯ್ ಕುಮಾರ್ 76ನೇ ಸ್ಥಾನದಲ್ಲಿ ಮತ್ತು ಸಲ್ಮಾನ್ ಖಾನ್ 82ನೇ ಸ್ಥಾನ ಪಡೆದಿದ್ದರು.