ವರಮಹಾಲಕ್ಷ್ಮಿ ಹಬ್ಬಕ್ಕೆ ಗಗನಕ್ಕೇರಿದ ಹೂವಿನ ಬೆಲೆ- ಯಾವ ಹೂವಿಗೆ ಎಷ್ಟು ಬೆಲೆ, ಇಲ್ಲಿದೆ ಮಾಹಿತಿ

ಬೆಂಗಳೂರು: ವರಗಳ ನೀಡೋ ವರಮಹಾಲಕ್ಷ್ಮಿ ದೇವಿ ಆರಾಧನೆಗೆ ಎರಡು ದಿನ ಬಾಕಿ ಇರುವಾಗ್ಲೇ ಸಿಲಿಕಾನ್ ಸಿಟಿ ಹೆಂಗೆಳೆಯರು ಶಾಪಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಬೆಲೆ ಜಾಸ್ತಿಯಾಗಿ ಹೂ ಭಾರವಾದ್ರೂ, ಲಕ್ಷ್ಮೀ ಅಲಂಕಾರಕ್ಕೆ ಖರೀದಿಯಲ್ಲಿ ತೊಡಗಿದ್ದಾರೆ. ಮಾರುಕಟ್ಟೆಗಳಲ್ಲಂತು ಹೂ, ಹಣ್ಣು ಕಾಯಿಗಳ ಬೆಲೆ ದುಪ್ಪಟ್ಟಾಗಿದ್ರೂ ಶಾಪಿಂಗ್ ಭರಾಟೆ ಜೋರಾಗಿದೆ.

ಯಾವ ಹೂವಿಗೆ ಎಷ್ಟು ಬೆಲೆ?

ಕನಕಾಂಬರ–  1000 ರೂ. ಕೆಜಿಗೆ
ಮಲ್ಲಿಗೆ  1000 ರೂ. ಕೆಜಿಗೆ
ಸೆವಂತಿಗೆ–  800 ರೂ. ಕೆಜಿಗೆ
ಮಲ್ಲಿಗೆ ದಿಂಡು  100 ರೂ. 1ಕ್ಕೆ
ಮಲ್ಲಿಗೆ ಹಾರ 500 ರೂ.
ಸುಗಂಧ ರಾಜಾ 600 ರೂ.
ಕಮಲದ ಹೂ  50 ರೂ. 1ಕ್ಕೆ
ವಿಳ್ಯದ ಎಲೆ  100  ರೂ. 1ಕಟ್ಟು

ಕನಕಾಂಬರ ಹಾಗೂ ಮಲ್ಲಿಗೆ ಕೆಜಿಗೆ 1,000 ರೂ. ಇದೆ. ಸೇವಂತಿಗೆ ಕೆಜಿಗೆ 800 ರೂ. ಇದೆ. ಮಲ್ಲಿಗೆ ದಿಂಡು 1ಕ್ಕೆ 100 ರೂ. ಇದೆ. ಮಲ್ಲಿಗೆ ಹಾರ 500 ರೂ. ಇದರೆ, ಸುಗಂಧ ರಾಜಾ 600 ರೂ. ಮುಟ್ಟಿದೆ. 1 ಕಮಲದ ಹೂ ಕೊಳ್ಳಬೇಕಂದ್ರೆ 50 ಕೊಡಬೇಕು. 1 ಕಟ್ಟು ವಿಳ್ಯದ ಎಲೆ ಬೆಲೆ 100 ರೂ. ತಲುಪಿದೆ.

ಗ್ರಾಹಕರು ಹೂ ಹಣ್ಣಿನ ಬೆಲೆ ಕೇಳಿ ಫುಲ್ ಶಾಕ್ ಆಗುತ್ತಿದ್ದಾರೆ. ಆದರೂ ಬೆಲೆ ದುಪ್ಪಟ್ಟಾಗಿದ್ರು ಲಕ್ಷ್ಮಿ ಹೂವಿನ ಅಲಂಕಾರ ಮಿಸ್ ಮಾಡೋಕ್ಕಾಗುತ್ತ. ಲಕ್ಷ್ಮಿಗೆ ಎಲ್ಲಾ ತರಹದ ನೈವೇದ್ಯ ಮಾಡಬೇಕು ಅಂತಾ ಸ್ವಲ್ಪ ಜಾಸ್ತಿನೇ ದುಡ್ಡು ತೆತ್ತು ಹೆಣ್ಣು ಮಕ್ಕಳು ಹೂವಿನ ಖರೀದಿಯಲ್ಲಿ ತೊಡಗಿದ್ದಾರೆ.

ಒಟ್ಟಿನಲ್ಲಿ ಬೆಲೆ ಏರಿಕೆ ನಡುವೆಯೂ ಲಕ್ಷ್ಮಿ ಹಬ್ಬದ ಸಂಭ್ರಮ ಮಾರ್ಕೆಟ್‍ನಲ್ಲಿ ಕಾಣಿಸುತ್ತಿದೆ. ಜನ ರೇಟ್‍ಗೆ ಚಿಂತಿಸದೆ, ಆಯಸ್ಸು, ಆರೋಗ್ಯ, ಐಶ್ವರ್ಯ, ಸಮೃದ್ಧಿ ಕೊಡುವ ಲಕ್ಷ್ಮಿಯನ್ನು ಆರಾಧಿಸೋಕೆ ಹೂವು ಹಣ್ಣು ಖರೀದಿ ಮಾಡುತ್ತಿದ್ದಾರೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ