ಮನದ ಆಸೆ ಬದಿಗಿಟ್ಟು ಕೇರಳಕ್ಕೆ ಮಿಡಿದ ಹೃದಯ: 14,800 ರೂ ಕೂಡಿಟ್ಟ ಹಣ ನೀಡಿದ 4ರ ಪೋರಿ

ಕೋಲ್ಕತ್ತಾ: ಭಾರೀ ಮಳೆಗೆ ಕೇರಳ ಜನತೆ ತತ್ತರಿಸಿದ್ದಾರೆ. ಅವರ ಸಹಾಯಕ್ಕಾಗಿ ಇಡೀ ದೇಶವೇ ಕೈ ಜೋಡಿಸಿದೆ. ಆದ್ರೆ ಇಲ್ಲೊಂದು ನಾಲ್ಕರ ಪೋರಿ ತಾನು ಕೂಡಿಟ್ಟ ಪ್ಯಾಕೇಟ್​ ಮನಿಯನ್ನ ಕೇರಳ ಸಂತ್ರಸ್ತರಿಗೆ ನೀಡಿದ್ದಾಳೆ.

ಹೌದು, ಪಶ್ಚಿಮ ಬಂಗಾಳದ ಜಾದವ್​ಪುರ್​ನ ನಿವಾಸಿ ಅಪರಜಿತಾ ಸಹಾ (4) ಕೇರಳದ ಜನತೆಯ ಸಂಕಷ್ಟಕ್ಕೆ ಹಸ್ತ ಚಾಚಿದ್ದಾರೆ. ತಾವು ಇದುವರೆಗೆ ಕೂಡಿಟ್ಟ ಹಣವೆಲ್ಲ ಕೇರಳದ ಸಂತ್ರಸ್ತರಿಗೆ ಕೊಡುಗೆ ನೀಡಿದ್ದಾರೆ.

ಪ್ರತಿ ಹುಟ್ಟುಹಬ್ಬದಂದು ಬಂದ ಹಣ ಮತ್ತು ಗಿಫ್ಟ್​ಗಳನ್ನು ಅಪರಜಿತಾ  ಕೂಡಿಟ್ಟಿದ್ದಳು. ಆ ಕೂಡಿಟ್ಟ ಹಣದಿಂದ ತನ್ನ ಡ್ಯಾನ್ಸ್​ ಕಲಿಕೆಗೆ ಸಿಡಿ ಪ್ಲೇಯರ್​ನ್ನು ತೆಗೆದುಕೊಳ್ಳಬೇಕೆಂಬ ಆಸೆಯಿತ್ತು. ಆದ್ರೆ ಕೇರಳದಲ್ಲಿ ಉಂಟಾದ ಪ್ರವಾಹವನ್ನು ಮಾಧ್ಯಮದಲ್ಲಿ ನೋಡಿದ್ದಾಳೆ. ಇದರಿಂದ ಕೊರಗಿದ ಅಪರಜಿತ ಮನಸ್ಸು ತನ್ನ ಆಸೆಯನ್ನು ಬದಿಗಿಟ್ಟು ಕೂಡಿಟ್ಟ ಹಣವೆಲ್ಲ ನೆರೆ ಸಂತ್ರಸ್ತರಿಗೆ ನೀಡಿದ್ದಾರೆ.

ತನ್ನ ಪೋಷಕರ ಜೊತೆ ನೇರ ಸಿಪಿಐ(ಎಂ) ಕಚೇರಿಗೆ ತೆರಳಿ ನಾಯಕ ಭೀಮನ್​ ಬೋಸ್​ ಅವರನ್ನು ಭೇಟಿ ಮಾಡಿದ ಅಪರಜಿತಾ `ನನ್ನ ಸಹೋದರಿಗಾಗಿ ನಾನು ಈ ಹಣವನ್ನು ನೀಡುತ್ತಿದ್ದೇನೆ’ ಅಂತಾ ಕೇರಳ ಸಂತ್ರಸ್ತರ ನಿಧಿಗೆ ಹಣವನ್ನು ನೀಡಿದರು. ಬಾಲಕಿಯ ಈ ಕಾರ್ಯಕ್ಕೆ ಸಿಪಿಐ(ಎಂ) ನಾಯಕ ಭೀಮನ್​ ಬೋಸ್​ ಫಿದಾ ಆಗಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ