ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018 ಪಂದ್ಯಾವಳಿಯಲ್ಲಿ ಐದನೇ ದಿನವೂ ಭಾರತದ ಪದಕ ಬೇಟೆ ಮುಂದುವರಿದಿದ್ದು, ಇಂದು 2 ಪದಕಗಳನ್ನು ಬಾಚಿದೆ.
ಪುರುಷರ ಶೂಟಿಂಗ್ ವಿಭಾಗದ ಡಬಲ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಭಾರತೀಯ ಶೂಟರ್ 15 ವರ್ಷದ ಶಾರ್ದುಲ್ ವಿಹಾನ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.
ಉತ್ತರ ಪ್ರದೇಶದ ಶಾರ್ದೂಲ್ 73 ಅಂಕಗಳೊಡನೆ ಬೆಳ್ಳಿ ಜಯಿಸಿದ್ದಾರೆ. ಇನ್ನುಇದಕಿಂತ ಒಂದೇ ಅಂಕ ಹೆಚ್ಚು (74) ಗಳಿಸಿದ್ದ ಕೊರಿಯಾದ 34 ರ ಹರೆಯದ ಶಿನ್ ಹ್ಯುನ್ವೂ ಚಿನ್ನ ಗೆದ್ದಿದ್ದಾರೆ.
ಕಳೆದ ವರ್ಷ ನಡೆದಿದ್ದ ಶೂಟ್ ಗನ್ ನ್ಯಾಷನಲ್ ಚಾಂಪಿಯನ್ ಶಿಪ್ನಲ್ಲಿ ವಿಹಾನ್ ನಾಲ್ಕು ಚಿನ್ನದ ಪದಕಗಳನ್ನು ಪಡೆದಿದ್ದರು. ರಜತ ಪದಕ ವಿಜೇತ ಶಾರ್ದುಲ್ ವಿಹಾನ್ಗೆ ಕ್ರೀಡಾ ಸಚಿವ ರಾಜ್ಯವರ್ಧನ್ ರಾಥೋಡ್ ಅಭಿನಂದನೆ ಸಲ್ಲಿಸಿದ್ದಾರೆ.