ಬೆಂಗಳೂರು, ಆ.22- ಕ್ವಿಕ್ ರೈಡ್ ಆಯೋಜಿಸಿದ್ದ ಫ್ರೀಡಮ್ ಫ್ರಮ್ ಟ್ರಾಫಿಕ್ ಅಭಿಯಾನಕ್ಕೆ ಅಮೋಘ ಬೆಂಬಲ ವ್ಯಕ್ತವಾದ ಫಲವಾಗಿ ಬೆಂಗಳೂರಿನ 4 ಲಕ್ಷಕ್ಕೂ ಅಕ ಮಂದಿ ಇದರಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.
ಈಗಾಗಲೇ 11000 ಟನ್‍ಗಳಿಗೂ ಅಕ ಕಾರ್ಬನ್ ಬಿಡುಗಡೆ ತಡೆಗಟ್ಟಿರುವ ಕ್ವಿಕ್ ರೈಡ್ ಆಯೋಜಿಸಿದ್ದ ಫ್ರೀಡಂ ಫ್ರಮ್ ಟ್ರಾಫಿಕ್ ಜಾಗೃತಿ ಕಾರ್ಯಕ್ರಮದಿಂದ ನಮ್ಮ ಬೆಂಗಳೂರು ಥ್ರಿಲ್ ಆಗಿದೆ.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕ್ವಿಕ್ ರೈಡ್ ಸಂಸ್ಥೆ ಕಾರ್‍ಪೂಲಿಂಗ್ (ಕಾರಿನ ಪ್ರಯಾಣ ಹಂಚಿಕೊಳ್ಳುವುದು) ಕುರಿತು ಫ್ರೀಡಂಫ್ರಮ್‍ಟ್ರಾಫಿಕ್ ಹೆಸರಿನ ವಿನೂತನ ಜಾಗೃತಿ ಅಭಿಯಾನದಲ್ಲಿ ನಗರದ 150ಕ್ಕೂ ಹೆಚ್ಚಿನ ಅಪಾರ್ಟ್‍ಮೆಂಟ್‍ಗಳ À 4 ಲಕ್ಷಕ್ಕೂ ಅಕ ಮಂದಿ ಪಾಲ್ಗೊಂಡಿದ್ದರು.
ಈ ಅಭಿಯಾನಕ್ಕೆ ಅಮೋಘ ಪ್ರತಿಕ್ರಿಯೆ ಲಭ್ಯವಾಗಿದ್ದು, ರಸ್ತೆಗಳಲ್ಲಿನ ಇಕ್ಕಟ್ಟನ್ನು ನಿವಾರಿಸಲು ಇದೊಂದು ಅತ್ಯುತ್ತಮ ಪರಿಹಾರ ಎಂದು ಹಲವರು ಶ್ಲಾಘಿಸಿದ್ದಾರೆ. ಇದೇ ವೇಳೆ ಮಕ್ಕಳಿಗಾಗಿ ಫ್ರೀಡಂ ಫ್ರಮ್‍ಟ್ರಾಫಿಕ್ ಮತ್ತು ಗೋಗ್ರೀನ್ ವಸ್ತು ವಿಷಯ ಆಧರಿಸಿದ ಚಿತ್ರಕಲಾ ಸÀ್ಪರ್ಧೆ ಆಯೋಜಿಸಲಾಗಿತ್ತು. ಪ್ರತಿ ಸೊಸೈಟಿಯಲ್ಲಿ ಉತ್ತಮ ಚಿತ್ರಕಲೆ ಪ್ರದರ್ಶಿಸಿದ 3 ಮಕ್ಕಳನ್ನು ವಿಜಯಿ ಎಂದು ಘೋಷಿಸಲಾಯಿತು.
ಈ ಮೂಲಕ ಅಪಾರ್ಟ್‍ಮೆಂಟ್ ನಿವಾಸಿಗಳಲ್ಲಿ ಕಾರ್ ಪೂಲಿಂಗ್ ಅದರ ಮಹತ್ವ ಹಾಗೂ ಅಗತ್ಯತೆ ಕುರಿತು ಜಾಗೃತಿ ಮೂಡಿಸಲಾಯಿತು.್ನ ಕಾರ್‍ಪೂಲಿಂಗ್‍ನ ಗ್ರಾಹಕರು ಹೆಚ್ಚು ಹೆಚ್ಚು ಜನರಿಗೆ ಇದರ ಮಹತ್ವದ ಮಾಹಿತಿ ನೀಡಿ, ಈ ಅಭಿಯಾನ ಹೆಚ್ಚು ಮಂದಿಯನ್ನು ತಲುಪುವಲ್ಲಿ ನೆರವಾದರು.