
ಕೊಡಗು,ಆ.22- ಸರಿಯಾಗಿ ಕೆಲಸ ಮಾಡದಿದ್ದರೆ ಮನೆಗೆ ಹೊರಡಿ ಎಂದು ಜಿಲ್ಲಾಕಾರಿ ಶ್ರೀವಿದ್ಯಾ ಅವರು ಅಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಡಿಕೇರಿಯಲ್ಲಿ ತುರ್ತು ಜಿಲ್ಲಾಡಳಿತ ಸಭೆ ನಡೆಸಿದ ಜಿಲ್ಲಾಕಾರಿಗಳು ನಿನ್ನೆ ಸರಿಯಾಗಿ ಕೆಲಸ ಮಾಡದ ಅಕಾರಿಗಳನ್ನು ತೆಗೆದು ಹಾಕಲಾಗಿದೆ. ನೀವು ಅಷ್ಟೇ ಸರಿಯಾಗಿ ಕೆಲಸ ಮಾಡದಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅಕಾರವಿದೆ ಎಂಬ ಕಾರಣಕ್ಕೆ ದುರುಪಯೋಗ ಮಾಡಿಕೊಳ್ಳಬೇಡಿ,ಶ್ರಮ ವಹಿಸಿ ಜವಾಬ್ದಾರಿಯಿಂದ ಕೆಲಸ ಮಾಡಿ ಎಂದು ಸೂಚನೆ ನೀಡಿದರು.
ರಾಜ್ಯದ ಹಲವು ಜಿಲ್ಲೆಗಳಿಂದ ಬರುತ್ತಿರುವ ಸಾಮಾಗ್ರಿಗಳನ್ನು ನೆರೆ ಸಂತ್ರಸ್ತರಿಗೆ ತಲುಪಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕರಾದ ಅಪ್ಪಚ್ಚು ರಂಜನ್ ಕೂಡ ಭಾಗಿಯಾಗಿದ್ದರು.