ಒಂದಲ್ಲ ಎರಡಲ್ಲ: ಇದು ಪುಣ್ಯಕೋಟಿ ಕಥೆಯ ಮುಂದಿನ ಭಾಗ!

ಬೆಂಗಳೂರು: “ರಾಮ ರಾಮ ರೇ” ನಿರ್ದೇಶಕ ಡಿ. ಸತ್ಯ ಪ್ರಕಾಶ್ ತಮ್ಮ ಎರಡನೇ ಚಿತ್ರದ ಬಿಡುಗಡೆಗೆ ಸಿದ್ದವಾಗಿದ್ದಾರೆ. ಅವರ “ಒಂದಲ್ಲ ಎರಡಲ್ಲ” ಚಿತ್ರ ಸಹ “ರಾಮ ರಾಮ….” ಬಗೆಯಲ್ಲೇ ಚಿತ್ರ ಜಗತ್ತಿನಲ್ಲಿ ಹೊಸ ಸೆನ್ಶೇಷನ್ ಸೃಷ್ಟಿಸಲಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ನಿರ್ದೇಶಕರು ತಮ್ಮ ಹೊಸ ಚಿತ್ರವು ಕನ್ನಡದ ಜನಪ್ರಿಯ ಜಾನಪದ ಕಥೆ “ಪುಣ್ಯಕೋಟಿ” ಮುಂದಿನ ಭಾಗವಾಗಿರಲಿದೆ ಎಂದಿದ್ದಾರೆ.
ಚಿತ್ರವು ಹಸು ಹಾಗೂ ಕರು (ತಾಯಿ-ಮಗು)ವಿನ ಕರುಳ ಸಂಬಂಧವನ್ನು ಹೊಂದಿದ್ದು ನಿರ್ದೇಶಕರು ತಮ್ಮ ಚಿತ್ರದಲ್ಲಿ ಇದಕ್ಕೊಂದು ಮಾನವೀಯ ಸ್ಪರ್ಷ ನೀಡಿದ್ದಾರೆ.
“ರಾಮ ರಾಮ ರೇ” ಚಿತ್ರದಲ್ಲಿರುವ ತೀಕ್ಷ್ಣವಾದ ಕಥೆ ಇಲ್ಲಿಲ್ಲ, ಮುಖ್ಯವಾಗಿ ಮತ್ತೆ ಅಂತಹದೇ ಕಥೆಯನ್ನು ಮಾಡುವುದು ತನ್ನ ಉದ್ದೇಶವೂ ಆಗಿಲ್ಲ ಹೀಗಾಗಿ ತಾನು ಸರಳವಾದ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಸತ್ಯ ಪ್ರಕಾಶ್ ನುಡಿದಿದ್ದಾರೆ ” “ಪ್ರೇಕ್ಷಕರಿಗೆ ಒಂದೇ ಏಕತಾನತೆಯ ಚಿತ್ರಗಳನ್ನು ತೋರಿಸಲು ನಾನು ಬಯಸಲಾರೆ.. ನನ್ನ ಎರಡನೆಯ ಚಲನಚಿತ್ರವು ಮುಗ್ಧತೆಯನ್ನೇ ಪ್ರಧಾನವಾಗಿ ಇರಿಸಿಕೊಂಡಿದೆ. “ಒಂದಲ್ಲ ಎರಡಲ್ಲ” ದಲ್ಲಿ ನನ್ನ ಮೊದಲ ಚಿತ್ರದಲ್ಲಿದ್ದವರು ಇಲ್ಲ, ಹಾಗೆಯೇ “ರಾಮ ರಾಮ ರೇ” ನೋಡದೆ ಇದ್ದವರು ಇದನ್ನು ನೋಡಿದರೆ ಈತ ಹೊಸ ನಿರ್ದೇಶಕನಿರಬೇಕು ಎಂದೆಣಿಸುವ ಸಾಧ್ಯತೆ ಇದೆ..
“ಮನುಷ್ಯ ಪ್ರೌಢಾವಸ್ಥೆ ತಲುಪಿದಂತೆಲ್ಲಾ ಮಗುವಿನ ಮುಗ್ದ ಸ್ವಭಾವದಿಂದ ದೂರವಾಗುತ್ತಾನೆ. ಇದನ್ನು ನನ್ನ ಈ ಚುತ್ರದಲ್ಲಿ ಹೈಲೈಟ್ ಮಾಡಿ ತೋರಿಸಲಾಗಿದೆ.ಇದೊಂದು ಸಾರ್ವತ್ರಿಕ ವಿಷಯವಾಗಿದ್ದು ಚಿತ್ರದ ಪ್ರಮುಖ ಪಾತ್ರದಲ್ಲಿ ರೋಹಿತ್ ಪಾಂಡವಪುರ ಇದ್ದಾರೆ” ಸತ್ಯ ಪ್ರಕಾಶ್ ವಿವರಿಸಿದರು.
ಉಮಾಪತಿ ಶ್ರೀನಿವಾಸ್ ಅವರು ಚಲನಚಿತ್ರ ನಿರ್ಮಾಪಕರಾಗಿದ್ದು ಲಾಭದ ಹಂಚಿಕೆ ಆಧಾರದ ಮೇಲೆ ನಿರ್ದೇಶಕನೊಂದಿಗೆ ಸಹಭಾಗಿಯಾಗಲು  ಅವರುಇ ಸಿದ್ದವಿದ್ದಾರೆ.”ಒಬ್ಬ ಕಮರ್ಷಿಯಲ್ ಚಿತ್ರ ನಿರ್ಮಾಪಕ ಈ ರೀತಿಯ ಚಿತ್ರದಲ್ಲಿ ಆಸಕ್ತಿಯನ್ನು ತೋರಿಸಿದ್ದಾರೆ.ಎಂದರೆ ಇದೊಂದು ಮಹತ್ವದ ವ್ಯವಹಾರವಾಗಿದೆ.ಇಲ್ಲದಿದ್ದರೆ, ನಿರ್ದೇಶಕ ಈ ರೀತಿಯ ಚಲನಚಿತ್ರವನ್ನು ಮಾಡುವುದು ಕಠಿಣವಾಗಲಿದೆ”ಅವರು ಹೇಳುತ್ತಾರೆ.
ಹೊಸಬರನ್ನು ಒಳಗೊಂಡಿರುವ ಈ ಚಿತ್ರಕ್ಕೆ ಎಷ್ಟು ಹೂಡಿಕೆ ಮಾಡಬೇಕೆಂದು ಮೊದಲೇ ನಿರ್ಧರಿಸುವುದು ಸಹ ಕಠಿಣವಾಗಿದೆ.”ನಾನೊಬ್ಬ ನಿರ್ದೇಶನಾಗಿದ್ದು ನಾನು ನನ್ನ ಸುತ್ತ ಅಭಿಮಾನಿ ಬಳಗವನ್ನೇನೂ ಹೊಂದಿಲ್ಲ.ಅಲ್ಲದೆ ಚಿತ್ರದಲ್ಲಿ ಯಾವುದೇ ದೊಡ್ಡ ಕಲಾವಿದರಿಲ್ಲ.ಇದು ಮಾಸ್ ಚುತ್ರವೂ ಅಲ್ಲ, ಹೀಗಾಗಿ ಚಿತ್ರದ ಸಂಬಂಧ ಪ್ರೇಕ್ಷಕರನ್ನು ಹ್ಹಿಡಿದಿಡುವುದು ದೊಡ್ಡ ಸವಾಲೇ ಸರಿ” ನಿರ್ದೇಶಕರು ಹೇಳಿದ್ದು ಬಿಡುಗಡೆಯಾದ ಮೊದಲ ಮೂರೇ ದಿನಗಳಲ್ಲಿ ಗಲ್ಲಾ ಪೆಟ್ಟಿಗೆ ಭರ್ತುಇಯಾಗುವುದುಅ ಎನ್ನುವ ನಿರೀಕ್ಷೆ ಅವರದಲ್ಲ.”ನಾನು ವಿಭಿನ್ನ ರೀತಿಯ ಪ್ರೇಕ್ಷರನ್ನು ಆಹ್ವಾನಿಸುತ್ತೇನೆ,. ಪ್ರೇಕ್ಷಕ ತಮ್ಮ ಬಾಯಿಯಿಂದ ಬಾಯಿಗೆ ಈ ಚಿತ್ರದ ವಿಚಾರವನ್ನು ಪ್ರಚುರಪಡಿಸುತ್ತಾ ಹೋಗುತ್ತಾನೆ ಎಂದುನಾನು ಭಾವಿಸುತ್ತೇನೆ”
ಸಾಯಿ ಕೃಷ್ಣ ಕುಡ್ಲ, ಎಂಕೆ ಮಠ, ಆನಂದ್ ನೀನಾಸಂ, ಪ್ರಭುದೇವ ಹೊಸದುರ್ಗ, ನಾಗಭೂಷಣ ಹಾಗೂ ಇನ್ನಿತರರು “ಇಒಂದಲ್ಲ ಎರಡಲ್ಲ” ಚಿತ್ರದಲ್ಲಿ ಅಭಿನಯಿಸಿದ್ದು ವಾಸುಕಿ ವೈಭವ್ ಮತ್ತು ನೋಬಿನ್ ಪೌಲ್ ಚಿತ್ರಕ್ಕೆ ಸಂಗೀತ ನಿಡಿದ್ದಾರೆ. ಚಿತ್ರಕ್ಕೆ  ಲವಿತ್ ಅವರ ಛಾಯಾಗ್ರಹಣವಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ