ಉಗ್ರರ ಅಟ್ಟಹಾಸ: ಬಿಜೆಪಿ ಸದಸ್ಯನ ಮೇಲೆ ಗುಂಡಿನ ದಾಳಿ

ಪುಲ್ವಾಮಾ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಎಲ್ಲೆ ಮೀರುತ್ತಿದೆ. ತಡರಾತ್ರಿ ಬಿಜೆಪಿ ಸದಸ್ಯನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಪುಲ್ವಾಮಾದ ರಾಖ್​ ಲಿಟ್ಟರ್​ ಗ್ರಾಮದ ಶಬ್ಬೀರ್​ ಅಹ್ಮದ್​ ಎಂಬಾತನ ಮೇಲೆ ನಸುಕಿನ ಜಾವ 2:30ಕ್ಕೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈತ ಬಿಜೆಪಿಯ ಸಕ್ರಿಯ ಸದಸ್ಯನಾಗಿದ್ದ ಎನ್ನಲಾಗ್ತಿದೆ.
ಮೃತ ಶಬ್ಬೀರ್​ ಮೃತದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

ಇಂದು ಮತ್ತೆ ತಮ್ಮ ವಿಕೃತಿ ಮೆರೆದಿರುವ ಉಗ್ರರು ಕುಲ್ಗಾಂ ಜಿಲ್ಲೆಯ ಝಝ್ರಿಪೊರದ ಈದ್ಗಾ ಬಳಿ ಪೊಲೀಸ್​ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದು,  ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ