ಕೊಚ್ಚಿನ್: ಕೇರಳದ ಪ್ರವಾಹ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ 1 ಸಾವಿರ ಕೋಟಿ ರೂ. ಮೊತ್ತದ ಪ್ರೀಮಿಯಂ ಕಟ್ಟಬೇಕಾಗುತ್ತದೆ ಎಂದು ವಿಮಾ ಕಂಪನಿಳು ಲೆಕ್ಕ ಹಾಕಿವೆ.
ಈ ನಡುವೆ ಕೇರಳದ ಮಹಾ ವಿಪತ್ತಿನಲ್ಲಿ ಅಪಾರ ಸಾವು ನೋವು, ನಷ್ಟಗಳಾಗಿರುವುದರಿಂದ ಇನ್ನೊಂದೆರಡ್ಮೂರು ದಿನಗಳಲ್ಲಿ ಪರಿಹಾರ ನೀಡಲು ಆರಂಭಿಸಲಾಗುವುದು ಎಂದು ವಿಮಾ ಕಂಪನಿಗಳು ಹೇಳಿವೆ.
ಈ ಸಂಬಂಧದ ಅರ್ಜಿಗಳನ್ನ ನಾಲ್ಕೈದು ದಿನಗಳಲ್ಲಿ ಸಲ್ಲಿಕೆ ಮಾಡಲಾಗುವುದು ಹಾಗೂ ಆ ಬಳಿಕ ವಿಮಾ ಕಂಪನಿಗಳು ಎಷ್ಟು ಪ್ರಮಾಣದ ಪರಿಹಾರ ನೀಡಬೇಕಾಗುತ್ತದೆ ಎಂಬ ಅಂದಾಜು ಸಿಗಲಿದೆ ಎಂದು ಒರಿಯಂಟಲ್ ಇನ್ಶೂರೆನ್ಸ್ ಕಂಪನಿಯ ಚೇರ್ಮನ್ ಎಂಡಿ ಎ.ವಿ. ಗಿರಿರಾಜ್ ಕುಮಾರ್ ಹೇಳಿದ್ದಾರೆ.
ಆಟೋ ಬಜಾಜ್: ಮಾರುತಿ ಕಂಪನಿ ಈಗಾಗಲೇ ಕೇರಳದ ನಿರಾಶ್ರಿತರಿಗೆ 2 ಕೋಟಿ ರೂ. ಪರಿಹಾರ ಘೋಷಿಸಿದೆ. ಕೇರಳ ಸಿಎಂ ಪರಿಹಾರ ನಿಧಿಗೆ ಚೆಕ್ ಹಸ್ತಾಂತರಿಸಿದೆ. ಇನ್ನು ಜುಂಕಿ ದೇವಿ ಬಜಾಜ್ ಗ್ರಾಮ ವಿಕಾಸ ಕಂಪನಿ 1 ಕೋಟಿ ರೂ. ನೀಡಿದೆ. ಮಾರುತಿ ಸುಜೂಕಿ ಸಹ 2 ಕೋಟಿ ರೂ. ಪರಿಹಾರ ನಿಧಿಯನ್ನ ನೀಡಿದ್ದಲ್ಲದೇ ಹೆಚ್ಚುವರಿ 1.5 ಕೋಟಿ ಅನುದಾನವನ್ನೂ ಒದಗಿಸಿದೆ.
ಸ್ಟಾರ್ ಇಂಡಿಯಾ ಕಂಪನಿ ಸಹ ಕೇರಳ ನಿರಾಶ್ರಿತರಿಗೆ ಹಣ ನೀಡುವಂತೆ ಆಸ್ಸೋಂ ಸಿಎಂ ಪರಿಹಾರ ನಿಧಿಗೆ 5 ಕೋಟಿ ರೂ. ನೀಡಿದೆ. ಈ ಬಗ್ಗೆ ಮಾತನಾಡಿರುವ ದಕ್ಷಿಣ ಭಾರತೀಯ ಮ್ಯಾನೇಜರ್ ಕೆ ಮಾಧವನ್ ಕೇರಳ ಸಿಎಂ ಪಿಣರಾಯಿ ವಿಜಯನ್ಗೆ ಚೆಕ್ ಹಸ್ತಾಂತರಿಸಿದರು.
ಹೀರಾಗ್ರೂಪ್ ಸಹ ಕೇರಳದ ಜನರ ನೆರವಿಗೆ ನಿಂತಿದೆ.. ಕೋಟಿ ರೂ. ಚೆಕ್ ಅನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ಗೆ ಹಸ್ತಾಂತರಿಸಿದ್ದಾರೆ. ಅಷ್ಟೇ ಅಲ್ಲ ಬಿಸ್ಕಟ್, 100 ಟನ್ ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳನ್ನ ಪೂರೈಸಿದ್ದಾರೆ.