ಸೆ.1ರಿಂದ ಸಿಗರೇಟ್‌ ಪ್ಯಾಕೆಟ್‌ ಮೇಲೆ ಹೊಸ ಎಚ್ಚರಿಕೆ

ಹೊಸದಿಲ್ಲಿ: ಸಿಗರೇಟ್‌ ಮತ್ತು ಇತರೆ ತಂಬಾಕು ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ ಹೊಸ ಚಿತ್ರಸಹಿತ ಎಚ್ಚರಿಕೆಯನ್ನು ಪ್ರಕಟಿಸಬೇಕು. ಜತೆಗೆ ಸಿಗರೇಟ್‌ ತೊರೆಯಲು ಬಯಸುವ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸಹಾಯವಾಣಿ ಸಂಖ್ಯೆಯನ್ನು ಪ್ರಕಟಿಸಬೇಕು. ಸೆ.1ರಿಂದಲೇ ಈ ಕ್ರಮ ಜಾರಿಗೆ ತರಬೇಕು ಎಂದು ಆರೋಗ್ಯ ಸಚಿವಾಲಯ ಆದೇಶಿಸಿದೆ.

‘ತಂಬಾಕಿನಿಂದ ಕ್ಯಾನ್ಸರ್‌ ಬರುತ್ತದೆ’, ‘ಯಾತನೆಯ ಸಾವಿಗೆ ತಂಬಾಕು ಕಾರಣ’ ಎನ್ನುವ ಅರ್ಥದ ಇಂಗ್ಲಿಷ್‌ ಸಂದೇಶಗಳನ್ನು ಕೆಂಪು ಬಣ್ಣದ ಹಿನ್ನೆಲೆಯಲ್ಲಿ ಬಿಳಿ ಬಣ್ಣದಲ್ಲಿ ಪ್ರಕಟಿಸಬೇಕು. ಜತೆಗೆ ‘ಕ್ವಿಟ್‌ ಟುಡೇ ಕಾಲ್‌ 1800ಧಿ11ಧಿ2356’ ಎಂಬುದಾಗಿ ಕಪ್ಪು ಹಿನ್ನೆಲೆಯ ಮೇಲೆ ಬಿಳಿ ಅಕ್ಷರದಲ್ಲಿ ಪ್ರಕಟಿಸಬೇಕು. ಇದು ಕಡ್ಡಾಯವಾಗಿದ್ದು, ಸಿಗರೇಟ್‌ ಮತ್ತು ತಂಬಾಕು ಪ್ಯಾಕೆಟ್‌ಗಳ ಮೇಲೆ ಪ್ರಕಟಿಸಬೇಕು.

ತಂಬಾಕು ಬಿಡಬೇಕು ಎಂದು ಬಯಸುವ ಜನರು ಪ್ಯಾಕೆಟ್‌ ಮೇಲಿರುವ ಸಂಖ್ಯೆಗೆ ಕರೆ ಮಾಡಿದರೆ, ಆನ್‌ಲೈನ್‌ ಮೂಲಕ ನೆರವು ನೀಡುವ ವ್ಯವಸ್ಥೆ ರೂಪಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲಿನಿಂದಲೂ ಎಚ್ಚರಿಕೆಯ ಸಂದೇಶಗಳನ್ನು ಪ್ರಕಟಿಸುವ ಪರಿಪಾಠ ಜಾರಿಯಲ್ಲಿದೆ. ಆದರೆ, ಚಿತ್ರಗಳ ಮೂಲಕ ತಂಬಾಕು ಸೇವನೆಯ ಅಪಾಯ ಬಿಂಬಿಸುವ ಕ್ರಮ ಇತ್ತೀಚಿನ ವರ್ಷಗಳಲ್ಲಿ ಜಾರಿಗೆ ಬಂದಿದೆ. ಶೇ.46ರಷ್ಟು ಅನಕ್ಷರಸ್ಥರು ಸಿಗರೇಟ್‌ ಸೇದುತ್ತಾರೆ. ಅದರಲ್ಲಿ ಶೇ.16ರಷ್ಟು ಕಾಲೇಜು ಪದವೀಧರರಿದ್ದಾರೆ. ಹೆಚ್ಚಿನ ಜನರ ಜಾಗೃತಗೊಳಿಸುವ ನಿಟ್ಟಿನಲ್ಲಿ ಚಿತ್ರ ಸಂದೇಶದ ಎಚ್ಚರಿಕೆ ಪದ್ಧತಿ ಜಾರಿಯಲ್ಲಿದೆ. ಇದರ ಜತೆಗೆ ಸಹಾಯವಾಣಿ ಈಗ ಸೇರಿಕೊಂಡಿದೆ. ಪ್ಯಾಕೆಟ್‌ ಮೇಲೆ ದೊಡ್ಡದಾಗಿ ಸಂದೇಶ ಪ್ರಕಟಿಸುವ ಕ್ರಮವನ್ನು ತಂಬಾಕು ಕಂಪನಿಗಳು ವಿರೋಧಿಸಿದ್ದವು. ಆದರೂ, ಕೊನೆಗೆ ಸರಕಾರದ ಕ್ರಮಕ್ಕೆ ಮಣಿದಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ