ಬೆಂಗಳೂರು,ಆ.22- ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಿರಾಶ್ರಿತರ ಪುನರ್ ವಸತಿ ಕಾರ್ಯಕ್ಕಾಗಿ ದೇಣಿಗೆ ನೀಡ ಬಯಸುವ ದಾನಿಗಳು ಚೆಕ್ ಮೂಲಕವೇ ಹಣ ಸಂದಾಯ ಮಾಡಬೇಕೆಂದು ಕೊಡಗು ಗೌಡ ಸಮಾಜಗಳ ಒಕ್ಕೂಟ ಮನವಿ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕೂಟದ ಅಧ್ಯಕ್ಷ ಸೋಮಣ್ಣ ತೂರ್ಕಲೆ ಮಾತನಾಡಿ, ಕಳೆದ ಕೆಲ ದಿನಗಳಿಂದ ಸುರಿದ ಭಾರಿ ಮಳೆಯಿಂದ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಉಂಟಾಗಿದೆ. ಇದರಿಂದ ನೂರಾರು ಜನರ ಪ್ರಾಣ ಹಾನಿಯಾಗಿದೆ. ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಇವರೆಲ್ಲರಿಗೂ ಪುರ್ನವಸತಿ ಕಲ್ಪಿಸುವ ಅಗತ್ಯವಿದೆ ಎಂದರು.
ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಸಂಘಸಂಸ್ಥೆಗಳು , ಮಠಾೀಶರು ಈ ಪ್ರದೇಶಗಳ ಪುನರ್ವಸತಿ ನಿರ್ಮಾಣಕ್ಕೆ ನೆರವು ನೀಡಿದ್ದಾರೆ ಹಾಗೂ ಅನೇಕ ಸಚಿವರು ಭೇಟಿ ನೀಡಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಕೊಡಗಿನಲ್ಲಿ ಅನೇಕ ಸಮುದಾಯಗಳು ವಾಸಿಸುತ್ತಿವೆ. ಗೌಡ ಸಮಾಜದವರು ಅತಿ ಹೆಚ್ಚು ಸಂಖ್ಯೆಯಲ್ಲಿ ವಾಸಿಸುತ್ತಿದ್ದು,ಎಲ್ಲಾ ವಾಸಿಗಳಿಗೆ ಪುನರ್ವಸತಿಗಾಗಿ ಗೌಡ ಸಮಾಜ ಶ್ರಮಿಸುತ್ತಿದೆ ಎಂದರು.
ಪುನರ್ವಸತಿಗಾಗಿ ದೇಣಿಗೆ ನೀಡ ಬಯಸುವವರು ವಿಜಯ ಬ್ಯಾಂಕ್, ಗಂಗಾನಗರ, ಬೆಂಗಳೂರು-32, ಬ್ಯಾಂಕ್ ಖಾತೆ- ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ವೆಲ್‍ಫೇರ್ ಫಂಡ್, ಖಾತೆ ಸಂಖ್ಯೆ 106501011002456, ಐಎಫ್‍ಎಸ್‍ಸಿ ಕೋಡ್ ವಿಐಜೆಬಿ0001065 ಇಲ್ಲಿಗೆ ಚೆಕ್ ಕಳುಹಿಸಬಹುದು.