ಕ್ಲಾರ್ಕ್ಸ್ ಇನ್ ಬ್ರೀಡ್ಜ್ ರೆಸ್ಟೋರೆಂಟ್ ಹೊಸ ಖಾದ್ಯ ಬಿಡುಗಡೆ

 

ಹುಬ್ಬಳ್ಳಿ: ಹುಬ್ಬಳ್ಳಿ ಮಹಾನಗರ ಜನತೆಯ ಸೇವೆಗೆ ಸಮರ್ಪಣೆಗೊಂಡಿರುವ ಕ್ಲಾರ್ಕ್ಸ್ ಇನ್ ಹೋಟೆಲನ ಬ್ರಿಡ್ಜ್ ರೆಸ್ಟೋರೆಂಟನಲ್ಲಿ ಮತ್ತಷ್ಟು ಹೊಸ ಅಭಿರುಚಿಯ ಖಾದ್ಯ ಪದಾರ್ಥಗಳನ್ನು ಸವಿಯಲು ಹೊಸ ಮೆನುಕಾರ್ಡ ಬಿಡುಗಡೆಗೊಳಿಸಲಾಗಿದೆ ಎಂದು ಹೊಟೇಲ್ ವ್ಯವಸ್ಥಾಪಕ ವಿನಾಯಕ ತಿಳಿಸಿದರು.

ನಗರದಲ್ಲಿಂದು ಕ್ಲಾರ್ಕ್ಸ್ ಇನ್ ಹೋಟೆಲನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂತರಾಷ್ಟ್ರೀಯ ತಾರಾ ಹೊಟೇಲಗಳಲ್ಲಿ ದೊರೆಯುವ ಮೋಘಲಾಯಿ ಎಗ್ಗ್, ಚಿಕನ್ ರೋಲ್, ಬೇಕಡ್ ವೆಜ್ ವಿಥ್ ಗ್ರಿಲ್ಡ್ ಪೈನಾಪಲ್, ಗ್ರಿಲ್ಡ್ ಚಿಕನ್ ಸ್ಟೀಕ್ ವಿಥ ಟೊಮ್ಯಾಟೊ ಬ್ಯಾಸೀಲ ಸಾಸ್, ಚಿಕನ್ ಸ್ಟೋಗನಾಫ್ ದೊರೆಯುತ್ತದೆ ಎಂದರು. ಅಲ್ಲದೇ ಸಸ್ಯಹಾರಿ ಹಾಗೂ ಮಂಸಹಾರಿ ಪದಾರ್ಥಗಳು ದೊರೆಯುತ್ತವೆ ವಿಶೇಷ ಖಾದ್ಯಗಳಾದ ಸ್ಕ್ವೀಡ್ ಸಾಲ್ಟ್ ಎನ್ ಪೆಪ್ಪರ್, ರೇಡ್/ಗ್ರೀನ್/ ಎಲ್ಲೋ ವೆಜ್ ಮತ್ತು ನಾನ್ ವೆಜ್ ಥಾಯಿ ಕರಿ, ಅಸೋರ್ಟಟೆಡ್ ವೆಜ್ ಸೀಝಲರ್, ನಾನವೆಜ್ ಸೀಝಲರ್ ಸೇರಿದಂತೆ ಹಲವಾರು ವಿಶೇಷ ಅಭಿರುಚಿ ಖಾದ್ಯಗಳು ಮೆನುವಿನಲ್ಲಿ ಸೇರಿಸಲಾಗಿದೆ ಎಂದರು.
ವಿಶೇಷವಾಗಿ ನಗರದಲ್ಲಿಯೇ ಮೊದಲ ಬಾರಿಗೆ ವಾಸಾಬಿ ಪ್ರಾನ್ಸ್ ಎನ್ನುವ ಹೊಸ ಸಿಗಡಿ ಮೀನಿನ ಖಾದ್ಯವನ್ನು ಪರಿಚಯಿಸಲಾಗುತ್ತಿದೆ ಇದಲ್ಲದೇ ಪ್ರತಿ ಬುಧವಾರ, ಶನಿವಾರ ಮತ್ತು ರವಿವಾರಗಳಂದು ಮಹಾ ಬಫೆಟ್ ಡಿನ್ನರನಲ್ಲಿ ಅನಲಿಮಿಟೆಡ್ ಊಟವನ್ನು ಸವಿಯಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಪ್ರದೀಪ್, ಕೋಟಿ, ಸಂಜಯ ಮೊಂಡಲ ಸೇರಿದಂತೆ ಇತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ