ವಿ.ಸೋಮಣ್ಣ ಪ್ರತಿಭಾ ಪುರಸ್ಕಾರ

 

ಬೆಂಗಳೂರು, ಆ.21- ಸರ್ಕಾರಿ ಹಾಗೂ ಬಿಬಿಎಂಪಿ ಪ್ರೌಢಶಾಲೆಯಲ್ಲಿ 2017-18ನೇ ಸಾಲಿನ ವ್ಯಾಸಂಗ ಮಾಡಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೆ.80ಕ್ಕಿಂತ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಶ್ರೀ ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ವಿ.ಸೋಮಣ್ಣ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪಾಲನೇತ್ರ ತಿಳಿಸಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಸ್ವವಿವರಗಳೊಮದಿಗೆ ಇತ್ತೀಚಿನ ಭಾವಚಿತ್ರ, ದೃಢೀಕರಿಸಿದ ಅಂಕಪಟ್ಟಿ ಮತ್ತು ಅರ್ಜಿಯನ್ನು ಆ.31ರೊಳಗೆ ಪ್ರಧಾನಕಾರ್ಯದರ್ಶಿ ಶ್ರೀ ವಿ.ಸೋಮಣ್ಣ ಪ್ರತಿಷ್ಠಾನ, ನಂ.1425, 11ನೇ ಕ್ರಾಸ್, 1ನೇ ಡಿ ಮೈನ್‍ರೋಡ್, ಕೆಂಗೇರಿ ಸ್ಯಾಟ್‍ಲೈಟ್ ಟೌನ್, ಬೆಂಗಳೂರು-60 ಈ ವಿಳಾಸಕ್ಕೆ ಕಳುಹಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.960666684/ 9113064607 ಸಂಪರ್ಕಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ