ರಿಟರ್ನ್ಸ್ ನಲ್ಲಿ ತಪ್ಪಾಗಿದ್ದರೆ ಪರಿಷ್ಕೃತ ಆದಾಯ ತೆರಿಗೆ ವಿವರ ಸಲ್ಲಿಸಲು ಅವಕಾಶ

ಬೆಂಗಳೂರು,ಆ.20- ರಿಟರ್ನ್ಸ್ ನಲ್ಲಿ ವಿವರ ತಪ್ಪಾಗಿದೆ ಎಂದು ಗೊತ್ತಾದರೆ ಪರಿಷ್ಕೃತ ಆದಾಯ ತೆರಿಗೆ ವಿವರ ಸಲ್ಲಿಸಲು ಅವಕಾಶವಿದೆ.
ವೈಯಕ್ತಿಕ ಮಾಹಿತಿ, ಬ್ಯಾಂಕ್ ವಿವರಗಳ ತಪ್ಪು ಮಾಹಿತಿ, ಆದಾಯ ತೆರಿಗೆಗೆ ಸಂಬಂಧಿಸಿದ ಯಾವುದೇ ದಾಖಲಾತಿಗಳನ್ನು ಲಗತ್ತಿಸದಿದ್ದರೆ, ಹಣದ ವಿವಿರ ತಪ್ಪಾಗಿದ್ದರೆ ಇದನ್ನು ಸರಿಪಡಿಸುವುದು ಹೇಗೆ ಎಂಬ ಯೋಚನೆ ನಿಮಗೆ ಬರುತ್ತದೆ. ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಆದಾಯ ತೆರಿಗೆ ಇಲಾಖೆಯವರು ಇಂತಹ ಸಮಸ್ಯೆಗಳ ಪರಿಹಾರಕ್ಕೆಂದೇ ಹಲವು ಮಾರ್ಗಸೂಚಿಗಳನ್ನು ಕ್ಲಿಯರ್ ಟ್ಯಕ್ಸ್ ಸಂಸ್ಥೆಯ ಸಂಸ್ಥಾಪಕ ಮತ್ತು ಮುಖ್ಯಕಾರ್ಯ ನಿರ್ವಹಣಾಧಿಕಾರಿ ಅರ್ಚಿತ್ ಗುಪ್ತಾ ತಿಳಿಸಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಆದಾಯ ತೆರಿಗೆ ವಿವಿರ ಸಲ್ಲಿಸುವ ವೇಳೆ ತಪ್ಪು ಮಾಡಿರುವ ತೆರಿಗೆ ಪಾವತಿದಾರರು ಮತ್ತೊಮ್ಮೆ ಪರಿಷ್ಕೃತ ಆದಾಯ ತೆರಿಗೆ ಪತ್ರ ಸಲ್ಲಿಸಲು ಅರ್ಹರಾಗಿರುತ್ತಾರೆ. ಉದಾಹರಣೆಗೆ, ಗೃಹಸಾಲ ಪಡೆದಿರುವ ತೆರಿಗೆ ಪಾವತಿದಾರ ಅದರ ಮೂಲಕ ಬಡ್ಡಿದರ ಮತ್ತು ತೆರಿಗೆ ಕಡಿತಗೊಳಿಸುವುದು ಬಿಟ್ಟಿದ್ದರೆ, ಅಂತಹ ವಿಷಯಗಳನ್ನು ಪರಿಷ್ಕೃತ ಪಟ್ಟಿಯಲ್ಲಿ ಸೇರಿಸಬಹುದು. ಈ ರೀತಿಯಲ್ಲಿ ಆತ ತನ್ನ ಆದಾಯ ತೆರಿಗೆ ವಿವರಗಳನ್ನು ಮತ್ತೊಮ್ಮೆ ಪರಿಷ್ಕರಿಸಿ ಕಳುಹಿಸಬಹುದು.

ಈ ಮುಂಚೆ ಅಂದರೆ 2015-16 ಆರ್ಥಿಕ ವರ್ಷಕ್ಕೂ ಮುನ್ನ, ನಿಗದಿತ ದಿನಾಂಕದೊಳಗೆ ಸಲ್ಲಿಸಿದ ಆದಾಯ ತೆರಿಗೆ ಲೆಕ್ಕಪತ್ರಗಳಲ್ಲಿ ತಪ್ಪಾಗಿದ್ದರೆ ಮಾತ್ರ ಮತ್ತೊಮ್ಮೆ ಪರಿಷ್ಕೃತ ಆದಾಯ ತೆರಿಗೆ ವಿವರ ಸಲ್ಲಿಸಲು ಅನುಮತಿ ನೀಡಲಾಗುತ್ತಿತ್ತು. ಆದರೆ 2017-18ರ ಆರ್ಥಿಕ ವರ್ಷದಿಂದ ಈ ನಿಯಮಗಳನ್ನು ಸಡಿಲಿಸಲಾಗಿದ್ದು, ದಿನಾಂಕ ಮೀರಿದ ನಂತರವೂ ಸಲ್ಲಿಕೆಯಾದ ಆದಾಯ ತೆರಿಗೆ ವಿವರಗಳಲ್ಲಿ ತಪ್ಪಾಗಿದ್ದರೆ, ಅಂತಹ ದಾಖಲೆಗಳನ್ನೂ ಮತ್ತೊಮ್ಮೆ ಪರಿಶೀಲಿಸಿ, ಸರಿಪಡಿಸಿ ಕಳುಹಿಸಬಹುದಾಗಿದೆ.

ಈ ಆಧಾರದಲ್ಲಿ ನೋಡುವುದಾದರೆ, ಪ್ರತೀ ವರ್ಷ ಮಾರ್ಚ್ 31ರ ವೇಳೆಗೆ ರಿಟನ್ರ್ಸ್ ಸಲ್ಲಿಸಬೇಕಾಗುತ್ತದೆ. 2017-18ರ ಆರ್ಥಿಕ ವರ್ಷದ ಅವಧಿ 2017 ಏಪ್ರಿಲ್ 1ರಿಂದ 2018ರ ಮಾರ್ಚ್ 31. ಅದೇ ರೀತಿ 2018-19ರ ಆರ್ಥಿಕ ವರ್ಷ 2019ರ ಮಾರ್ಚ್ 31ಕ್ಕೆ ಅಂತ್ಯವಾಗಲಿರುವುದರಿಂದ ಈ ದಿನಾಂಕದೊಳಗೆ ಎಂದು ಬೇಕಾದರೂ ರಿಟನ್ರ್ಸ್ ಸಲ್ಲಿಸಬಹುದು.
ಎಷ್ಟು ಬಾರಿ ಪರಿಷ್ಕೃತಗೊಳಸಿಬಹುದು:
ಸಲ್ಲಿಸಿರುವ ಮೂಲ ರಿಟರ್ನ್ ಅನ್ನು ಇಂತಿಷ್ಟೇ ಬಾರಿ ಪರಿಷ್ಕರಣೆಗೆ ಒಳಪಡಿಸಬೇಕು ಎಂಬ ನಿಯಮಗಳು ಇಲ್ಲ. ಮಾರ್ಚ್ 31ರ ನಂತರವೂ ಪರಿಷ್ಕರಿಸಿ ಸಲ್ಲಿಸಲು ಅವಕಾಶವಿದೆ. ಪ್ರತಿ ಬಾರಿ ಸಲ್ಲಿಸುವ ಮುನ್ನ, ಮೂಲ ರಿಟನ್ರ್ಸ್ ಮಾಹಿತಿ ತಿಳಿಸುವುದು ಕಡ್ಡಾಯ. ಆದರೆ ಆದಾಯ ತೆರಿಗೆ ರಿಟರ್ನ್ ಅನ್ನು ಎರಡಕ್ಕಿಂತ ಹೆಚ್ಚು ಬಾರಿ ಪರಿಷ್ಕರಣೆಗೆ ಒಳಪಡಿಸುವುದು ಒಳ್ಳೆಯದಲ್ಲ. ಇದು ಆದಾಯ ತೆರಿಗೆ ಇಲಾಖೆಯ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಒಂದು ವೇಳೆ ನೀವು ಸಲ್ಲಿಸಿರುವ ರಿಟರ್ನ್‍ನಲ್ಲಿ ಮಾಹಿತಿ ಸರಿ ಇಲ್ಲ ಎನಿಸಿದರೆ ಕೂಡಲೇ ತಜ್ಞರನ್ನು ಭೇಟಿ ಮಾಡುವುದು ಒಳ್ಳೆಯದರು.
ಪರಿಷ್ಕೃತ ರಿಟರ್ನ್ ಅನ್ನು ಪರಿಶೀಲಿಸುವುದು ಕಡ್ಡಾಯವೇ?
ರಿಟರ್ನ್ ಸಲ್ಲಿಸುವ ವಿಧಾನ ಮತ್ತು ಪರಿಷ್ಕೃತ ರಿಟರ್ನ್ ಸಲ್ಲಿಸುವುದು ಮೂಲ ರಿಟರ್ನ್ ನಂತೆಯೇ ಇರುತ್ತದೆ. ಹೀಗಾಗಿ ಪರಿಷ್ಕೃತಗೊಂಡ ಪ್ರತಿ ರಿಟರ್ನ್ ದಾಖಲೆಯನ್ನು ಪರಿಶೀಲನೆಗೆ ಒಳಪಡಿಸುವುದು ಕಡ್ಡಾಯ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ