ಅಫ್ಘಾನಿಸ್ತಾನ್​: 100 ಜನರನ್ನು ಒತ್ತೆಯಾಳಾಗಿರಿಸಿಕೊಂಡ ಉಗ್ರರು

ಕಾಬೂಲ್​:ಅಫ್ಘಾನಿಸ್ತಾನದಲ್ಲಿ ಮತ್ತೆ ಅಟ್ಟಹಾಸ ಮೆರೆದಿರುವ ತಾಲಿಬಾನ್ ಉಗ್ರರು ಮಹಿಳೆಯರು, ಮಕ್ಕಳು ಸೇರಿದಂತೆ 100 ಜನರನ್ನ ಒತ್ತೆ ಇರಿಸಿಕೊಂಡಿದ್ದಾರೆ.

ಅಫ್ಘಾನ್​ ಅಧ್ಯಕ್ಷ ಅಶ್ರಫ್​ ಘನಿ ಕದನವಿರಾಮ ಉಲ್ಲಂಘನೆ ಮಾಡದಂತೆ ಕರೆ ನೀಡಿದ ದಿನವೇ ತಾಲಿಬಾನಿಗಳು ಈ ಕೃತ್ಯ ಎಸೆಗಿದ್ದಾರೆ. ತಾಲಿಬಾನ್​ ದಂಗೆಕೋರರು, ಕುಂದುಜ್​ ಪ್ರಾಂತ್ಯದಿಂದ ರಾಜಧಾನಿ ಕಾಬೂಲ್​ಗೆ ಬರುತ್ತಿದ್ದ ಮೂರು ಬಸ್​ಗಳನ್ನ ತಡೆದು ಅವರನ್ನೆಲ್ಲ ಅಪಹರಿಸಿ ಒತ್ತೆ ಇರಿಸಿಕೊಂಡಿದ್ದಾರೆ ಎಂದು ಕುಂದುಜ್​ ಪ್ರಾಂತೀಯ ಕೌನ್ಸಿಲ್​ನ ಮುಖ್ಯಸ್ಥ ಮೊಹಮ್ಮದ್​ ಯೂಸೂಫ್​ ಹೇಳಿಕೆ ನೀಡಿದ್ದಾರೆ.

ತಾಲಿಬಾನಿಗಳು ಸರ್ಕಾರಿ ನೌಕರರು ಹಾಗೂ ಭದ್ರತಾ ಸಿಬ್ಬಂದಿಗಳ ಸಂಬಂಧಿಕರನ್ನ ಗುರಿಯಾಗಿಸಿ ಈ ಕೃತ್ಯ ಎಸಗಿರಬಹುದು ಎಂದು ಅಯೂಬಿ ಶಂಕೆ ವ್ಯಕ್ತಪಡಿಸಿದ್ದಾರೆ.

Taliban take more than 100 hostage in Afghan bus ambush

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ