ನವದೆಹಲಿ:ಆ-19: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಹರಿದ್ವಾರದ ಹರ್ ಕಿ ಪೌರಿ ಪ್ರದೇಶದಲ್ಲಿ ಗಂಗಾನದಿಯಲ್ಲಿ ವಿಸರ್ಜಿಸಲಾಯಿತು.
ವಾಜಪೇಯಿ ಪುತ್ರಿ ನಮಿತಾ ಭಟ್ಟಾಚಾರ್ಯ ಮತ್ತು ಮೊಮ್ಮಗಳು ನೀಹಾರಿಕಾ ಅವರು ಸ್ಮೃತಿ ಸ್ಥಳದಲ್ಲಿ ಅಟಲ್ ಜೀ ಅವರ ಅಂತ್ಯಕ್ರಿಯೆ ನೆರವೇರಿದ ಸ್ಥಳದಿಂದ ಮೂರು ಮಣ್ಣಿನ ಮಡಿಕೆಗಳಲ್ಲಿ ಅಸ್ಥಿ ಮತ್ತು ಚಿತಾಭಸ್ಮವನ್ನು ಸಂಗ್ರಹಿಸಿ, ಪ್ರೇಮ್ ಆಶ್ರಮಕ್ಕೆ ತಂದರು.
ಬಳಿಕ ಹರಿದ್ವಾರದಲ್ಲಿ ಮಾಜಿ ಪ್ರಧಾನಿಯ ಚಿತಾಭಸ್ಮ ಮತ್ತು ಅಸ್ಥಿಗಳನ್ನು ಪುಣ್ಯ ನದಿಗಳಾದ ಗಂಗಾ, ಯಮುನಾ ಮತ್ತು ತಾಪಿ ನದಿಗಳಲ್ಲಿ ಸಕಲ ಗೌರವಗಳೊಂದಿಗೆ ವಿಸರ್ಜಿಸಲಾಯಿತು.
ಇದಕ್ಕೆ ಮುನ್ನ, ಗೃಹಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವರ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಾಜಪೇಯಿ ಅವರ ‘ಅಸ್ಥಿ ಕಲಶ ಯಾತ್ರೆ’ಯಲ್ಲಿ ಪಾಲ್ಗೊಂಡರು.
AtalBihariVajpayee’s daughter Namita immerses his ashes at Har-ki-Pauri in Haridwar.