ಕುಖ್ಯಾತ ಲೇಡಿ ಡಾನ್ ಮಮ್ಮಿ ಬಂಧನ

ನವದೆಹಲಿ ; ಆ.19- ಕೊಲೆ, ಸುಪಾರಿ ಹತ್ಯೆ, ಸುಲಿಗೆ, ಭೂ ಕಬಳಿಕೆ, ಕಳ್ಳಭಟ್ಟಿ ಮಾರಾಟ ಸೇರಿದಂತೆ 113 ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿರುವ ಕುಪ್ರಸಿದ್ದ ಲೇಡಿ ಡಾನ್ ಬಸಿರನ್ ಅಲಿಯಾಸ್ ಮಮ್ಮಿ(62) ಈಗ ದೆಹಲಿ ಪೆÇಲೀಸರ ಅತಿಥಿಯಾಗಿದ್ದಾಳೆ.

ಕಳೆದ ಜನವರಿಯಿಂದ ನಾಪತ್ತೆಯಾಗಿದ್ದ ಈ ಲೇಡಿ ರೌಡಿಯನ್ನು ದೆಹಲಿಯ ಸಂಗಮ್ ವಿಹಾರ್‍ನಲ್ಲಿ ಬಂಧಿಸಲಾಗಿದೆ ಎಂದು ದಕ್ಷಿಣ ಜಿಲ್ಲೆಯ ಉಪ ಪೆÇಲೀಸ್ ಆಯುಕ್ತ ರೋಮಿಲ್ ಬಾನಿಯಾ ತಿಳಿಸಿದ್ದಾರೆ.

2017ರ ಸೆಪ್ಟೆಂಬರ್‍ನಲ್ಲಿ ಮೀರಜ್ ಎಂಬ ಯುವಕನೊಬ್ಬನ ಕೊಲೆಯಲ್ಲಿ ಮಮ್ಮಿಯ ಕೈವಾಡ ಇದೆ ಎಂಬುದು ಸಾಬೀತಾದ ನಂತರ ಬಂಧಿಸಲು ಪೆÇಲೀಸರ ಮುಂದಾದಾಗ ನಾಪತ್ತೆಯಾಗಿದ್ದಳು. ಮಲ ಸಹೋದರಿಯೊಬ್ಬಳು ಯುವಕನನ್ನು ಹತ್ಯೆ ಮಾಡಲು ಈ ಕುಖ್ಯಾತ ಲೇಡಿ ರೌಡಿಗೆ 60,000 ರೂ.ಗಳ ಸುಪಾರಿ ನೀಡಿದ್ದಳು. ಕೆಲವು ದಿನಗಳ ನಂತರ ಅರಣ್ಯ ಪ್ರದೇಶದಲ್ಲಿ ಯುವಕನೊಬ್ಬನನ್ನು ಹತ್ಯೆ ಮಾಡಿ ಅರೆಬರೆ ಸುಟ್ಟು ಹಾಕಲಾಗಿದ್ದ ಶವ ಪತ್ತೆಯಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೆÇಲೀಸರು 2018ರ ಜನವರಿಯಲ್ಲಿ ಬಾಲಾಪರಾಧಿಯೊಬ್ಬನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಬಸಿರನ್ ಅಲಿಯಾಸ್ ಮಮ್ಮಿ ಹಾಗೂ ಆಕೆಯ ಸಹಚರರಾದ ಆಕಾಶ್ ಅಲಿಯಾಸ್ ಅಕ್ಕಿ, ವಿಕಾಸ್ ಅಲಿಯಾಸ್ ವಿಕ್ಕಿ ಹಾಗೂ ನೀರಜ್ ಅಲಿಯಾಸ್ ಜಗ್ಗಿ ಈ ಕೊಲೆಯಲ್ಲಿ ಶಾಮೀಲಾಗಿರುವುದು ಬಯಲಾಗಿತ್ತು.

ತನ್ನನ್ನು ಪೆÇಲೀಸರು ಬಂಧಿಸುತ್ತಾರೆಂಬ ಭೀತಿಯಿಂದ ಪರಾರಿಯಾಗಿದ್ದ ಮಮ್ಮಿ ಎಂಟು ತಿಂಗಳ ಕಾಲ ಅಹಮದಾಬಾದ್, ಅಲಹಾಬಾದ್, ಮೈನ್‍ಪುರಿ ಹಾಗೂ ಫಿರೋಜಾಬಾದ್‍ಗಳಲ್ಲಿ ತಲೆ ಮರೆಸಿಕೊಂಡಿದ್ದಳು.

ತನ್ನ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಶುಕ್ರವಾರ ಸಂಗಮ್ ವಿಹಾರಕ್ಕೆ ಈಕೆ ಬರುತ್ತಾಳೆಂಬ ಖಚಿತ ಮಾಹಿತಿ ಮೇರೆಗೆ ಪೆÇಲೀಸರು ಬಲೆ ಬೀಸಿ ಮಮ್ಮಿಯನ್ನು ಕೆಡವಿಕೊಂಡರು.

ಬಸಿರನ್ ಅಲಿಯಾಸ್ ಮಮ್ಮಿಯ ಅಪರಾಧಗಳ ಪಟ್ಟಿ ದೊಡ್ಡದು. 1980ರಲ್ಲಿ ಈಕೆ ತನ್ನ ಗಂಡ ಮತ್ತು ಕುಟುಂಬದೊಂದಿಗೆ ದೆಹಲಿಗೆ ಸ್ಥಳಾಂತರಗೊಂಡಳು. ದಕ್ಷಿಣ ದೆಹಲಿಯ ಗೋವಿಂದ್‍ಪುರಿ ಪ್ರದೇಶದ ನವ್‍ಜೀವನ್ ಕ್ಯಾಂಪ್‍ನಲ್ಲಿ ಆಶ್ರಯ ಪಡೆದಿದ್ದ ಈಕೆ ಆದಾಯದ ಮೂಲವನ್ನು ಹುಡುಕುತ್ತಿದ್ದಾಗ ಕಂಡು ಕೊಂಡ ಮಾರ್ಗ ನೀರಿನ ಅಭಾವವಿದ್ದ ಪ್ರದೇಶದಲ್ಲಿ ಕಾಳಸಂತೆಯಲ್ಲಿ ಮಾರಾಟ ಹಾಗೂ ಕಳ್ಳಭಟ್ಟಿ ದಂಧೆ.

ಇದು ಆಕೆ ಅಪರಾಧ ಜಗತ್ತು ಪ್ರವೇಶಕ್ಕೆ ಮುನ್ನುಡಿಯಾಯಿತು. ಕಾಲಕ್ರಮೇಣ ಬಸಿರನ್ ನಗರದ ಭೂಗತಲೋಕದ ಆಳಕ್ಕೆ ಇಳಿದಳು. ಅಲ್ಲದೇ ತನ್ನ ಎಂಟು ಮಕ್ಕಳ ನೆರವಿನೊಂದಿಗೆ ಅಪರಾಧ ಕೃತ್ಯಗಳನ್ನು ವಿಸ್ತರಿಸುತ್ತಾ ಹೋದಳು. ಸುಲಿಗೆ, ದರೋಡೆ, ಅಮಾಯಕರಿಂದ ಹಫ್ತಾ ವಸೂಲಿ, ಭೂಕಬಳಿಕೆ, ಕೊಲೆ ಯತ್ನ, ಕೊಲೆ, ಸುಪಾರಿ ಹತ್ಯೆ ಮೊದಲಾದ 113 ಕ್ರಿಮಿನಲ್ ಪ್ರಕರಣಗಳಲ್ಲಿ ಮಮ್ಮಿ ಶಾಮೀಲಾಗಿ, ಸಾರ್ವಜನಿಕರು ಮತ್ತು ಪೆÇಲೀಸರಿಗೆ ತಲೆನೋವಾಗಿದ್ದಳು.

lady Don, Basiran alias mummy,Delhi Gang

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ