ಬೆಂಗಳೂರು, ಆ.18- ಭಾರೀ ಮಳೆಯಿಂದ ತತ್ತರಿಸಿಹೋಗಿರುವ ಕೊಡಗಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೆÇಲೀಸ್ ಮಹಾನಿರ್ದೇಶಕ ಕಮಲ್ ಪಂಥ್ ಮೊಕ್ಕಾಂ ಹೂಡಿದ್ದಾರೆ.
ತುರ್ತು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎನ್‍ಡಿಆರ್‍ಎಫ್, ಕೆಎಸ್‍ಆರ್‍ಪಿ, ಗೃಹ ರಕ್ಷಕ ದಳ ಹಾಗೂ ಸೇನಾ ಕಾರ್ಯಾಚರಣೆಯನ್ನು ಪಂಥ್ ಅವರು ಖುದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ನೆರೆ ಜಿಲ್ಲೆಯ ಹಿರಿಯ ಪೆÇಲೀಸ್ ಅಧಿಕಾರಿಗಳನ್ನು ಕೊಡಗಿಗೆ ರವಾನಿಸಿಕೊಂಡಿದ್ದಾರೆ.
ಗೃಹ ರಕ್ಷಕ ದಳ ಮತ್ತು ನೆರೆ ಜಿಲ್ಲೆಯ ಪೆÇಲೀಸ್ ಅಧಿಕಾರಿಗಳು ತುರ್ತು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಪರಿಸ್ಥಿತಿಯ ಮೇಲೆ ನಿಗಾ ಇಡಲಾಗಿದೆ ಎಂದು ಪಂಥ್ ತಿಳಿಸಿದ್ದಾರೆ.
ಇಂದು ಕೂಡ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು, ಕೆಲವು ಪ್ರದೇಶಗಳಲ್ಲಿ ಗುಡ್ಡ ಕುಸಿತ ಪ್ರಕರಣಗಳು ಮುಂದುವರಿದಿವೆ. ಹೀಗಾಗಿ ಸ್ಥಳೀಯರನ್ನು ರಕ್ಷಿಸುವುದರ ಜತೆಗೆ ಗುಡ್ಡ ಕುಸಿತ ಪ್ರಕರಣದಿಂದ ಆಗುವ ಅನಾಹುತ ತಪ್ಪಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಪಂಥ್ ವಿವರಿಸಿದರು.