
ಬೆಂಗಳೂರು, ಆ.18- ಎರಡು ಲಕ್ಷದವರೆಗಿನ ರೈತರ ಬೆಳೆ ಸಾಲ ಮನ್ನಾ ಮಾಡಲಾಗಿದ್ದು, ಬ್ಯಾಂಕ್ನವರು ಅನಗತ್ಯವಾಗಿ ರೈತರಿಗೆ ಕಿರಿಕಿರಿ ಮಾಡಬಾರದೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ದೇವನಹಳ್ಳಿ-ವಿಜಯಪುರ ಆಕ್ಸೀಸ್ ಬ್ಯಾಂಕ್ಗೆ ಖುದ್ದು ಫೆÇೀನ್ ಮಾಡಿ ಸೂಚನೆ ನೀಡಿದರು.
ಇಲ್ಲಿನ ಆಕ್ಸೀಸ್ ಬ್ಯಾಂಕ್ನಲ್ಲಿ 1.25 ಲಕ್ಷ ಬೆಳೆ ಸಾಲ ಮಾಡಿರುವ ಲಕ್ಷ್ಮಮ್ಮ ಅವರಿಗೆ ನೋಟಿಸ್ ನೀಡಿರುವ ಬಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗಮನಕ್ಕೆ ತಂದ ವೇಳೆ, ಬ್ಯಾಂಕ್ನವರಿಗೆ ನೇರವಾಗಿ ಕರೆ ಮಾಡಿ, ಸರ್ಕಾರ ಎರಡು ಲಕ್ಷದವರೆಗೆ ಬೆಳೆ ಸಾಲ ಮನ್ನಾ ಮಾಡಿದೆ. ಮುಂದಿನ ಮಾರ್ಚ್ ವೇಳೆಗೆ ಬ್ಯಾಂಕ್ಗೆ ಎಲ್ಲ ಹಣವನ್ನು ಪಾವತಿ ಮಾಡಲಿದೆ.
ಅಲ್ಲಿಯವರೆಗೆ ರೈತರಿಗೆ ಯಾವುದೇ ರೀತಿಯ ತೊಂದರೆ ಕೊಡಬೇಡಿ. ಲಕ್ಷ್ಮಮ್ಮ ಅವರು 2015ರವರೆಗೆ ಬಡ್ಡಿ ಪಾವತಿ ಮಾಡಿದ್ದಾರೆ ಎಂದು ಹೇಳಿದರು.
ಬೆಳೆ ಸಾಲ ಮನ್ನಾ ಮಾಡಿರುವುದರಿಂದ ಬಿಜೆಪಿಯವರಿಗೆ ಸಾಕಷ್ಟು ನೋವಾಗಿದಂತಿದೆ ಎಂದು ಇದೇ ವೇಳೆ ಕುಮಾರಸ್ವಾಮಿ ವ್ಯಂಗ್ಯವಾಡಿದರು.