
ಬೆಂಗಳೂರು, ಆ.18- ಕೊಡಗು ಮೂಲದ ನಟಿ ದಿಶಾ ಪೂವಯ್ಯ ಅವರ ಕುಟುಂಬದ 25ಕ್ಕೂ ಹೆಚ್ಚು ಜನ ಮಳೆಯಲ್ಲಿ ಸಿಲುಕಿಕೊಂಡು ತೊಂದರೆಗೀಡಾಗಿದ್ದಾರೆ.
ಈ ಸಂಬಂಧ ನೆರವಿಗೆ ಧಾವಿಸಬೇಕೆಂದು ದಿಶಾ ಅವರು ಮುಖ್ಯಮಂತ್ರಿಯಲ್ಲಿ ಮನವಿ ಮಾಡಿದ್ದಾರೆ.
ಮಡಿಕೇರಿಯ ಮಹಾಕೂಡ್ಲುವಿನಲ್ಲಿರುವ ಅವರ ಮನೆ ಮಳೆಯಿಂದ ಜಲಾವೃತಗೊಂಡಿದ್ದು, ಮನೆಯಲ್ಲಿರುವ 25ಕ್ಕೂ ಹೆಚ್ಚು ಮಂದಿ ಸಂಕಷ್ಟದಲ್ಲಿದ್ದು, ಗರ್ಭಿಣಿಯೊಬ್ಬರಿದ್ದಾರೆ. ಹೆರಿಗೆಗೆ ದಿನಾಂಕ ಕೂಡ ನಿಗದಿಯಾಗಿದೆ. ಆಸ್ಪತ್ರೆಗೆ ಹೋಗಬೇಕಾದರೆ ಕುಶಾಲನಗರ ಅಥವಾ ಪಿರಿಯಾಪಟ್ಟಣಕ್ಕೆ ತೆರಳಬೇಕಾಗಿದೆ.
ನಿರಂತರ ಮಳೆಯಿಂದ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ. ದಯಮಾಡಿ ನೆರವು ನೀಡಬೇಕೆಂದು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನಟಿ ದಿಶಾ ಮುಖ್ಯಮಂತ್ರಿಕುಮಾರಸ್ವಾಮಿ ಅವರನ್ನು ಮನವಿ ಮಾಡಿದ್ದು, ಕೂಡಲೇ ಅವರ ನೆರವಿಗೆ ಧಾವಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.