
ಮಡಿಕೇರಿ: ಮಳೆಯ ರೌದ್ರನರ್ತನಕ್ಕೆ ಮಂಜಿನ ನಗರಿ ಖ್ಯಾತಿಯ ಮಡಿಕೇರಿ ಸಂಪೂರ್ಣ ನಡುಗಡ್ಡೆಯಂತಾಗಿದೆ. ಕುಸಿಯುತ್ತಿರುವ ಗುಡ್ಡ, ಧಾರಾಕಾರ ಮಳೆಯಿಂದ ತಾವು ತಮ್ಮವರನ್ನು ರಕ್ಷಿಸಿಕೊಳ್ಳಲು ಜನ ಹೆಣಗಾಡುತ್ತಿದ್ದಾರೆ.
ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿರುವ ಪ್ರವಾಹ ಪೀಡಿತ ಕೊಡಗಿಗೆ ಇಂದು ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ. ಇಂದು ಮಧ್ಯಾಹ್ನ ಕೊಡಗಿಗೆ ಭೇಟಿ ನೀಡಲಿರುವ ಸಿಎಂ ಅಧಿಕಾರಿಗಳ ಜೊತೆ ಸಭೆ ನಡೆಸಿ ಪ್ರವಾಹ ಪರಿಸ್ಥಿತಿಯ ಅವಲೋಕನ ಮಾಡಲಿದ್ದಾರೆ.