ವಾಜಪೇಯಿ ಅಂತಿಮ ದರ್ಶನ ಪಡೆದ ವಿದೇಶಿ ಗಣ್ಯರು

ನವದೆಹಲಿ:ಆ-17: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ದರ್ಶನದಲ್ಲಿ ಭೂತನ್ ದೊರೆ ಜಿಗ್ಮೆ ಖೇಸರ್ ನಾಮ್ಜಿಲ್ ವಾಂಗ್ಚಕ್ ಹಾಗೂ ಬಾಂಗ್ಲಾದೇಶ ವಿದೇಶಾಂಗ ಸಚಿವ ಅಬ್ದುಲ್ ಹಸನ್ ಮೊಹಮ್ಮದ್ ಆಲಿ ಪಾಲ್ಗೊಂಡು, ವಾಜಪೇಯಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ.

ಶ್ರೀಲಂಕಾ ಹಂಗಾಮಿ ವಿದೇಶಾಂಗ ಸಚಿವ ಲಕ್ಷ್ಣಣ್ ಕಿರಿಲ್ಲಾ, ನೇಪಾಳ ವಿದೇಶಾಂಗ ಸಚಿವ ಪ್ರದೀಸ್ ಗ್ಯಾವಾಲಿ, ಪಾಕಿಸ್ತಾನದ ಹಂಗಾಮಿ ಮಾಹಿತಿ ಸಚಿವ ಸಯ್ಯದ್ ಝುಪರ್ ಆಲಿ ಮತ್ತು ಅಪ್ಘಾನಿಸ್ತಾನದ ಹಿರಿಯ ಸಚಿವರು ವಾಜಪೇಯಿ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ವಾಜಪೇಯಿ ಅವರ ಕೊಡುಗೆ ಇದೆ. ಬಾಂಗ್ಲಾದೇಶ ಜನರಿಗಾಗಿ ಸದೃಢ ಸಹಕಾರವನ್ನು ವಾಜಪೇಯಿ ನೀಡಿದ್ದಾರೆ ಎಂದು ಬಾಂಗ್ಲಾದೇಶ ವಿದೇಶಾಂಗ ಸಚಿವ ಅಬ್ದುಲ್ ಹಸನ್ ಮೊಹಮ್ಮದ್ ಆಲಿ ಹೇಳಿದ್ದಾರೆ.

ವಾಜಪೇಯಿ ಅವರ ಪಾರ್ಥಿವ ಶರೀರವನ್ನು ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಗೆ ಆಗಮಿಸಿದ ಅಪಾರ ಪ್ರಮಾಣದ ಗಣ್ಯರು , ಅಭಿಮಾನಿಗಳು ಅಗಲಿದ ಹಿರಿಯ ಚೇತನದ ಅಂತಿಮ ದರ್ಶನ ಪಡೆದುಕೊಂಡರು.

Bhutan king, foreign ministers of Bangladesh, Sri Lanka,pay tribute to former PMAtal Bihari Vajpayee

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ