ಭಾರತೀಯ ರಾಜಕೀಯ ರಂಗದ ‘ಭಾರತ ರತ್ನ’

ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ದೇಶ ಕಂಡ ಮಹಾನ್‌ ಮುತ್ಸದ್ದಿಗಳಲ್ಲಿ ಒಬ್ಬರು. ಭಾರತ ರಾಜಕೀಯ ಹಾಗೂ ಇತಿಹಾಸದಲ್ಲಿಯೂ ‘ಭಾರತ ರತ್ನ’ ಇಡೀ ವಿಶ್ವವೇ ಭಾರತದ ಕಡೆ ತಿರುಗಿ ನೋಡುವಂತೆ ಮಾಡುವಲ್ಲಿ ಅಟಲ್‌ ಬಿಹಾರಿ ವಾಜಪೇಯಿಅವರ ಕೊಡುಗೆಯೂ ಮಹತ್ವದ್ದಾಗಿದೆ.

ಅವರ ಜೀವನದ ಬಗೆಗಿನ ಕೆಲವು ಮಾಹಿತಿಗಳು ಇಲ್ಲಿವೆ.

* ಮಧ್ಯಪ್ರದೇಶದ ಬ್ರಾಹ್ಮಣ ಕುಟುಂಬದಲ್ಲಿ ಕೃಷ್ಣ ಬಿಹಾರಿ ವಾಜಪೇಯಿ ಮತ್ತು ಕೃಷ್ಣ ದೇವಿ ದಂಪತಿಗಳ ಮಗನಾಗಿ ಡಿಸೆಂಬರ್ 25, 1924 ರಂದು ಗ್ವಾಲಿಯರ್‌ನಲ್ಲಿ ಜನನ.

*ಬಾಲ್ಯದಿಂದಲೇ ಹೋರಾಟ ಮನೋಭಾವ ಬೆಳೆಸಿಕೊಂಡಿದ್ದರು ಅಟಲ್‌. ಬ್ರಿಟಿಷರ ವಿರುದ್ಧ ಸಮರಕ್ಕಿಳಿದು ಜೈಲು ಸೇರಿದ್ದರು. ಬ್ರಿಟಿಷರ ವಿರುದ್ಧ ಹೋರಾಟದ ಹೊತ್ತಲ್ಲೇ ರಾಷ್ಟ್ರೀಯ ಸ್ವಯಂ ಸೇವಕ್ ಸಂಘ್ (ಆರೆಸ್ಸೆಸ್) ಮತ್ತು ಜನ ಸಂಘದಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು ವಾಜಪೇಯಿ.

* ಆರೆಸ್ಸೆಸ್ ಮ್ಯಾಗಜಿನ್ ನಡೆಸುವುದಕ್ಕೋಸ್ಕರ 1950ರಲ್ಲಿ ಕಾನೂನು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಆಮೇಲೆ ಆರೆಸ್ಸೆಸ್‌ ಪೋಷಿಸಿ, ಬಿಜೆಪಿಯ ಶಕ್ತಿಯನ್ನಾಗಿ ಮಾರ್ಪಡಿಸಿದರು.

* 1942-1945 ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಹೊತ್ತಲ್ಲಿ ವಾಜಪೇಯಿ ರಾಜಕೀಯಕ್ಕೆ ಧುಮುಕಿದ್ದರು. ಮೊದಲಿಗೆ ಕಮ್ಯುನಿಸ್ಟ್ ಆಗಿದ್ದ ವಾಜಪೇಯಿ ನಂತರ ಸಂಘದ ಸಹವಾಸ ಬೆಳೆಸಿಕೊಂಡರು.

* ಭಾರತೀಯ ಜನ ಸಂಘದ ಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಆಪ್ತ ಅನುಯಾಯಿಗಳಲ್ಲಿ ವಾಜಪೇಯಿ ಕೂಡ ಒಬ್ಬರು.

* 1953ರಲ್ಲಿ ಕಾಶ್ಮೀರದಲ್ಲಿ ಮುಖರ್ಜಿ ಆಮರಣಾಂತ ಉಪವಾಸ ಮಾಡಿದಾಗ ವಾಜಪೇಯಿ ಸಾಥ್ ನೀಡಿದ್ದರು. ಈ ಹೋರಾಟದ ನಂತರ ಅನಾರೋಗ್ಯದಿಂದ ಮುಖರ್ಜಿ ಮರಣ ಹೊಂದಿದರು. ಶ್ಯಾಮಪ್ರಸಾದ್‌ ಮುಖರ್ಜಿ ಅವರ ನಿಧನದಿಂದ ವಾಜಪೇಯಿ ವಿಚಲಿತಗೊಂಡಿದ್ದರು.

* ಮುಖರ್ಜಿಯ ಸಾವು ನಂತರ ಕಂಗೆಟ್ಟಿದ್ದ ವಾಜಪೇಯಿ ಚೇತರಿಸಿಕೊಂಡು ಮತ್ತೆ ಚಳವಳಿಯತ್ತ ಮುಖ ಮಾಡಿದರು. ರಾಜಕೀಯದ ಕಡೆ ಹೆಜ್ಜೆ ಹಾಕಿದರು. 1957ರಲ್ಲಿ ಮೊದಲ ಬಾರಿ ಸಂಸತ್ ಚುನಾವಣೆಯಲ್ಲಿ ಜಯ ಸಾಧಿಸಿದರು.

* 1957 ರಿಂದ 2009ರ ವರೆಗೆ ಲೋಕಸಭೆಯಲ್ಲಿ ವಾಜಪೇಯಿ ಸೇವೆ ಸಲ್ಲಿಸಿದರು.

* ನಾಲ್ಕು ದಶಕಗಳ ಕಾಲ ಪ್ರತಿಪಕ್ಷದಲ್ಲಿದ್ದ ಬಿಜೆಪಿ 1996ರಲ್ಲಿ ವಾಜಪೇಯಿ ನೇತೃತ್ವದಲ್ಲಿ ಅಧಿಕಾರಕ್ಕೇರಿತು. ಆದರೆ ಈ ಸರ್ಕಾರದ ಅವಧಿ 13 ದಿನಗಳು ಮಾತ್ರ.

* ನಂತರ 1998ರಲ್ಲಿ ಅಧಿಕಾರದ ಗಾದಿಯೇರಿದ ವಾಜಪೇಯಿ 13 ತಿಂಗಳುಗಳ ಕಾಲ ಅಧಿಕಾರ ನಡೆಸಿದರು. ಬಿಜೆಪಿ ನೇತೃತ್ವದ ಮೈತ್ರಿಕೂಟ ಸರ್ಕಾರಕ್ಕೆ ನೀಡಲಾಗಿದ್ದ ಬೆಂಬಲವನ್ನು ಎಐಎಡಿಎಂಕೆ ನೇತಾರೆ ಜೆ. ಜಯಲಲಿತಾ ಹಿಂಪಡೆದುಕೊಂಡರು. ಇದರಿಂದ ಸರಕಾರ ಉರುಳಿ ಬಿತ್ತು.

* 1999ರಲ್ಲಿ ಮತ್ತೆ ವಾಜಪೇಯಿ 5 ವರ್ಷಗಳ ಅಧಿಕಾರಾವಧಿ ಪೂರೈಸಿದರು.

* ಮೊರಾರ್ಜಿ ದೇಸಾಯಿ ಅವರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ವಾಜಪೇಯಿ ವಿಶ್ವ ಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಹಿಂದಿಯಲ್ಲಿ ಭಾಷಣ ಮಾಡಿ ಎಲ್ಲರ ದ್ದು ಅವರಿಗೆ ಹೆಚ್ಚು ಕೀರ್ತಿ ತಂದುಕೊಟ್ಟಿತ್ತು.

* 1999ರಲ್ಲಿ ಪಾಕಿಸ್ತಾನಕ್ಕೆ ಬಸ್ ಸಂಪರ್ಕ ಕಲ್ಪಿಸಿ ಪಾಕ್ ಭೇಟಿ ಮಾಡಿದ್ದು ಅವರ ಸಾಧನೆಗಳಲ್ಲೊಂದು.

* ಬ್ರಹ್ಮಚಾರಿಯಾಗಿದ್ದ ವಾಜಪೇಯಿ ಉತ್ತಮ ವಾಗ್ಮಿ ಮತ್ತು ಕವಿ.

* ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ 1992ರಲ್ಲಿ ಪದ್ಮ ವಿಭೂಷಣ ಮತ್ತು ಮಾರ್ಚ್ 27, 2015 ರಂದು ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ