‘ಅಜಾತಶತ್ರು’ ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ನಿಮಗೆ ಗೊತ್ತಿಲ್ಲದ 15 ಸಂಗತಿಗಳು

ನವದೆಹಲಿ: ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನದ ಆಸಕ್ತಿದಾಯಕ ಸಂಗತಿಗಳು ನಿಮಗಾಗಿ…
*ಮಧ್ಯಪ್ರದೇಶದ ಬ್ರಾಹ್ಮಣ ಕುಟುಂಬದಲ್ಲಿ ಕೃಷ್ಣ ಬಿಹಾರಿ ವಾಜಪೇಯಿ ಮತ್ತು ಕೃಷ್ಣ ದೇವಿ ದಂಪತಿಗಳ ಮಗನಾಗಿ ಡಿಸೆಂಬರ್ 25, 1924 ರಂದು ಗ್ವಾಲಿಯರ್ ನಲ್ಲಿ  ಜನನ.
*ಹದಿಹರೆಯದಲ್ಲಿ ಬ್ರಿಟಿಷರ ವಿರುದ್ಧ ಸಮರಕ್ಕಿಳಿದು ಜೈಲು ಸೇರಿದ್ದರು ವಾಜಪೇಯಿ. ಬ್ರಿಟಿಷರ ವಿರುದ್ಧ ಹೋರಾಟದ ಹೊತ್ತಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮತ್ತು ಜನ ಸಂಘದಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು.
*1950ರಲ್ಲಿ ಆರೆಸ್ಸೆಸ್ ಮ್ಯಾಗಜಿನ್ ನಡೆಸುವುದಕ್ಕೋಸ್ಕರ ವಾಜಪೇಯಿ ಕಾನೂನು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಆಮೇಲೆ ಆರೆಸ್ಸೆಸ್ಸ್ ಅನ್ನು ಪೋಷಿಸಿ, ಬಿಜೆಪಿಯ ಶಕ್ತಿಯನ್ನಾಗಿ ಮಾರ್ಪಡಿಸಿದರು.
* 1942-1945 ರ ಕ್ವಿಟ್ ಇಂಡಿಯಾ ಚಳವಳಿಯ ಹೊತ್ತಲ್ಲಿ ವಾಜಪೇಯಿ ರಾಜಕೀಯಕ್ಕೆ ಧುಮುಕಿದ್ದರು. ಮೊದಲಿಗೆ ಕಮ್ಯುನಿಸ್ಟ್ ಆಗಿದ್ದ ಇವರು ಆಮೇಲೆ ಆರೆಸ್ಸೆಸ್ಸ್ ಸೇರಿದರು.
*ವಾಜಪೇಯಿ ಅವರು ಭಾರತೀಯ ಜನ ಸಂಘದ ಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಆಪ್ತ ಅನುಯಾಯಿಯಾಗಿದ್ದರು.
*1953ರಲ್ಲಿ ಕಾಶ್ಮೀರದಲ್ಲಿ ಮೂಖರ್ಜಿ ಅಮರಣಾಂತ ಉಪವಾಸ ಮಾಡಿದಾಗ ವಾಜಪೇಯಿ ಅವರಿಗೆ ಸಾಥ್ ನೀಡಿದ್ದರು. ಈ ಹೋರಾಟದ ನಂತರ ಅಸೌಖ್ಯದಿಂದ ಮೂಖರ್ಜಿ ಮರಣ ಹೊಂದಿದರು. ಅವರ ಸಾವು ಯುವಕ ವಾಜಪೇಯಿಯನ್ನು ತುಂಬಾ ಕಂಗೆಡಿಸಿತ್ತು.
*ಮೂಖರ್ಜಿಯ ಸಾವು ನಂತರ  ವಾಜಪೇಯಿ  1957ರಲ್ಲಿ ಮೊದಲ ಬಾರಿ ಸಂಸತ್ ಚುನಾವಣೆಯಲ್ಲಿ ವಿಜಯ ಸಾಧಿಸಿದರು.
*1957 ರಿಂದ 2009ರ ವರೆಗೆ ಲೋಕಸಭೆ, ಸಂಸತ್ನ ಕೆಳಮನೆಯಲ್ಲಿ ವಾಜಪೇಯಿ ಅವರು ಸೇವೆ ಸಲ್ಲಿಸಿದರು.
*4 ದಶಕಗಳ ಕಾಲ ವಿಪಕ್ಷದಲ್ಲಿದ್ದ ಬಿಜೆಪಿ 1996ರಲ್ಲಿ ವಾಜಪೇಯಿ ನೇತೃತ್ವದಲ್ಲಿ ಅಧಿಕಾರಕ್ಕೇರಿತು. ಆದರೆ ಈ ಸರ್ಕಾರ 13 ದಿನಗಳ ಕಾಲವಷ್ಟೇ ಅಧಿಕಾರ ನಡೆಸಿತು.
*1998ರಲ್ಲಿ 13 ತಿಂಗಳುಗಳ ಕಾಲ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಎಐಎಡಿಎಂಕೆ ನೇತಾರೆ ಜೆ. ಜಯಲಲಿತಾ ಅವರ ಬೆಂಬಲ ವಾಪಸ್ ತೆಗೆದುಕೊಂಡಾಗ ಮತ್ತೆ ಅಧಿಕಾರ ಕಳೆದುಕೊಂಡಿತು.
*1999ರಲ್ಲಿ ಮತ್ತೆ ವಾಜಪೇಯಿ ಸರ್ಕಾರ  ಅಧಿಕಾರಕ್ಕೇರಿ 5 ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿತು .
*ಮೊರಾರ್ಜಿ ದೇಸಾಯಿ ಅವರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ವಾಜಪೇಯಿ ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ್ದು ಅವರಿಗೆ ಹೆಚ್ಚು ಕೀರ್ತಿ ತಂದುಕೊಟ್ಟಿತ್ತು.
*1999ರಲ್ಲಿ ಪಾಕಿಸ್ತಾನಕ್ಕೆ ಬಸ್ ಸಂಪರ್ಕ ಕಲ್ಪಿಸಿ ಪಾಕ್ ಭೇಟಿ ಮಾಡಿದ್ದು ಅವರ ಸಾಧನೆಗಳಲ್ಲೊಂದು. ಅಲ್ಲದೇ ಇದೇ ವಿಚಾರ ವಿವಾದಕ್ಕೂ ಕಾರಣವಾಗಿತ್ತು.
*ಬ್ರಹ್ಮಚಾರಿಯಾಗಿದ್ದ ವಾಜಪೇಯಿ ಉತ್ತಮ ವಾಗ್ಮಿ ಮತ್ತು ಕವಿಯಾಗಿದ್ದಾರು.
*ಭಾರತ ಸರ್ಕಾರ ಇವರಿಗೆ 1992ರಲ್ಲಿ ಪದ್ಮ ವಿಭೂಷಣ ಮತ್ತು ಮಾರ್ಚ್  27, 2015 ರಂದು ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ