![gopura pooje](http://kannada.vartamitra.com/wp-content/uploads/2018/08/gopura-pooje-508x381.jpg)
ಬೆಂಗಳೂರು: ಬೆಂಗಳೂರನ್ನು ಆ ಕಾಲದಲ್ಲೇ ಆಧುನಿಕ ನಗರವನ್ನಾಗಿ ನಿರ್ಮಿಸಿದ್ದ ಕೆಂಪೇಗೌಡರು ನಮ್ಮೆಲ್ಲರಿಗೂ ಮಾದರಿ ಎಂದು ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಲಾಲ್ಬಾಗ್ ಬೆಟ್ಟದ ಮೇಲಿನ ಕೆಂಪೇಗೌಡರ ಗೋಪುರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಬೆಂಗಳೂರನ್ನು ಕಟ್ಟಿ ಬೆಳೆಸಿದ ಕೆಂಪೇಗೌಡರು ಮುಂದಿನ ಪೀಳಿಗೆ ನಗರವನ್ನು ಮುನ್ನಡೆಸಲು ಮಾರ್ಗದರ್ಶಕರಾಗಿದ್ದಾರೆ ಎಂದರು.
ಈ ವೇಳೆ ಮೇಯರ್ ಸಂಪತ್ ರಾಜ್, ಇತರರು ಇದ್ದರು.