ಭಯಂಕರ ಶಬ್ದಕ್ಕೆ ತಬ್ಬಿಬ್ಬಾದ ರಾಜಧಾನಿ ಜನತೆ

ಬೆಂಗಳೂರು:ಆ-16: ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಸ್ಫೋಟಕ ಶಬ್ದವೊಂದು ಕೇಳಿಬಂದ ಪರಿಣಾಮ ಇಡೀ ಉದ್ಯಾನನಗರಿಯ ಜನತೆ ತಬ್ಬಿಬ್ಬಾದ ಘಟನೆ ನಡೆದಿದೆ.

ಮಧ್ಯಾಹ್ನ 3:15ರ ಸುಮಾರಿಗೆ ಸಂಭವಿಸಿದ ಭಾರೀ ಶ್ಯಬ್ದಕ್ಕೆ ಕಂಗಾಲಾದ ಜನರು ಭೂಕಂಪ ಸಂಭವಿಸಿದ ಆತಂಕಕ್ಕೀಡಾಗಿದ್ದು, ಮನೆ, ಕಛೇರಿ, ಶಾಲೆಗಳಿಂದ ಜನರು ಹೊರ ಓಡಿಬಂದಿದ್ದಾರೆ.

ನಗರದ ಡಾಲರ್ಸ್ ಕಾಲೋನಿ, ಜೆಪಿ. ನಗರ, ರಾಜರಾಜೇಶ್ವರಿ ನಗರ, ಕೆಂಗೇರಿ, ನಾಗರಭಾವಿ, ಕುಮಾರಸ್ವಾಮಿ ಲೇಔಟ್ ನಲ್ಲಿ ಈ ಭಾರೀ ಸ್ಫೋಟದ ಶಬ್ಧ ಕೇಳಿ ಬಂದಿದೆ.

ಸ್ಫೋಟದ ರಭಸಕ್ಕೆ ಮನೆ, ಕಟ್ಟಡಗಳೂ ಕೂಡ ಅಲುಗಾಡಿದ ಘಟನೆಗಳು ನಡೆದಿದೆ. ಕೆಲಮನೆಗಳಲ್ಲಿ ವಸ್ತುಗಳೆಲ್ಲ ಕೆಳಗೆ ಬಿದ್ದಿವೆ.

ಈ ಕುರಿತು ಭೂಗರ್ಭ ವಿಜ್ಞಾನಿಗಳು ಮಾಹಿತಿ ನಿಡಿದ್ದು, ಇದು ಭೂಗರ್ಭದ ಒಳಗೆ ಆಗಿರುವ ಕಂಪನವಲ್ಲ. ಮೋಡಗಳ ಏರುಪೇರಿನಿಂದಾಗಿ ಗಾಳಿಯ ಸ್ಥಾನಪಲ್ಲಟದಿಂದ ಶಬ್ಧ ಕೇಳಿ ಬಂದಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ