ಮಂಡ್ಯ: ಕೊಡಗಿನಲ್ಲಿ ಮಳೆಯ ಆರ್ಭಟದಿಂದ ಕೆ.ಆರ್.ಎಸ್.ಒಳಹರಿವಿನ ಪ್ರಮಾಣ ಏರಿಕೆಯಾಗಿದ್ದು ಎರಡನೇ ದಿನವು ಜಲಾಶಯದಿಂದ ನದಿಗೆ ೧.೨೨ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಕೆ.ಆರ್.ಎಸ್. ಜಲಾಶಯದ ಕೆಳಭಾಗದಲ್ಲಿ ತಗ್ಗು ಪ್ರದೇಶಗಳಿಗೆ ಪ್ರವಾಹ ಭೀತಿ ಎದುರಾಗಿದೆ. ನದಿ ಪ್ರವಾಹ ಶಾಲೆ ಪಕ್ಕಕ್ಕೆ ಬಂದಿರೋ ಹಿನ್ನಲೆಯಲ್ಲಿಎರಡನೇ ದಿನವು ಪಾಂಡವಪುರ ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದ ಅಂಗನವಾಡಿ ಮತ್ತು ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ.
ಪಶ್ವಿಮವಾಹಿನಿ ಬಳಿ ಜಲಾವೃತವಾದ ಹಲವು ದೇಗುಲದಲ್ಲಿ ಪೂಜೆ ಸ್ಥಗಿತಗೊಳಿಸಲಾಗಿದ್ದು, ನದಿ ತೀರದ ಪ್ರವಾಸಿ ತಾಣಗಳ ಬಳಿ ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ.
ಈ ನಡುವೆ ದೊಡ್ಡಪಾಳ್ಯ ಗ್ರಾಮದ ಬಳಿ ನಿರ್ಮಾಣವಾಗ್ತಿರೋ ಬ್ಯಾರೇಜ್ ನಿಂದ ಗ್ರಾಮಕ್ಕೆ ನೀರು ನುಗ್ಗುವ ಆತಂಕ ಎದುರಾಗಿದೆ. ಕೆ.ಆರ್.ಎಸ್. ಜಲಾಶಯಕ್ಕೆ ಒಳ ಹರಿವಿನ ಪ್ರಮಾಣದಲ್ಲಿ ಭಾರೀ ಹೆಚ್ಚಳ ಹಿನ್ನಲೆಯಲ್ಲಿ ಜಲಾಶಯದಿಂದ ನದಿಗೆ ಬಿಡ್ತಿರೋ ಹೊರ ಹರಿವಿನ ಪ್ರಮಾಣದಲ್ಲಿ ಮತ್ತಷ್ಟು ಏರಿಕೆಯಾಗಿದೆ.೧.೨೦ ಲಕ್ಷ ಕ್ಯೂಸೆಕ್ಸ್ ಹೊರ ಹರಿವಿನ ಪ್ರಮಾಣ ೧.೩೦ ಲಕ್ಷ ಕ್ಯೂಸೆಕ್ ಗೆ ಏರಿಕೆಯಾಗಿದ್ದು, ಇನ್ನೂ ೧.೫೦ ಲಕ್ಷ ಕ್ಯೂಸೆಕ್ ಗೆ ಏರಿಸುವ ಬಗ್ಗೆ ಅಧಿಕಾರಿಗಳು ಜಲಾಶಯ ಅಧಿಕಾರಿಗಳ ಮಾಹಿತಿ ಪಡೆಯುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ನದಿ ದಂಡೆಯ ಜನ್ರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕಾ.ನೀ.ನಿ.ದ ಅಧಿಕಾರಿಗಳು ಮನವಿ ಮಾಡಿದ್ದಾರೆ.