ಕಲಬುರಗಿ:ಆ-16; ರಾಜ್ಯಾದ್ಯಂತ ಮಳೆ ಅಬ್ಬರ ಜೋರಾಗಿದ್ದು, ಕಲಬುರಗಿಯಲ್ಲಿ ಸುರಿದ ಭಾರಿ ಮಳೆಗೆ ಪಕ್ಕದ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಮನೆಯಲ್ಲಿ ಮಲಗಿದ್ದ ತಾಯಿ ಮಕ್ಕಳು ಸೇರಿ ಮೂವರು ಸಾವನ್ನಪ್ಪಿದ್ದಾರೆ.
ಪಕ್ಕದ ಮನೆಯ ಗೋಡೆ ಕುಸಿದು ಪ್ರಭು ಎನ್ನುವವರ ಮನೆಯ ಮೇಲೆ ಬಿದ್ದು ಮನೆಯೊಳಗೆ ಮಲಗಿದ್ದ ತಾಯಿ ಲಕ್ಷ್ಮೀ ಬಾಯಿ (30) ಮಕ್ಕಳಾದ ಯಲ್ಲಮ್ಮ (11),ಅಂಬಿಕಾ (10) ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ಪ್ರಭು ಅವರು ಗಾಯಗೊಂಡಿದ್ದು , ಗಂಭೀರ ಸ್ವರೂಪದಲ್ಲಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿಂಬರ್ಗಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತೀರ್ಥಹಳ್ಳಿಯ ಕೋಣಂದೂರಿನಲ್ಲಿ ಗೋಡೆ ಕುಸಿದು ಬಿದ್ದು ಅಯೂಬ್ಎನ್ನುವ ಬಾಲಕ ಸಾವನ್ನಪ್ಪಿದ್ದಾನೆ.