ಸಾವಿರಾರು ವರ್ಷಗಳಿಂದ ಜ್ಞಾನಭಂಡಾರವಾಗಿದ್ದ ಭಾರತ ಇತರೆ ದೇಶಗಳಿಗೂ ಮಾದರಿ

 

ಬೆಂಗಳೂರು, ಆ.15-ಸಾವಿರಾರು ವರ್ಷಗಳಿಂದ ಜ್ಞಾನಭಂಡಾರವಾಗಿದ್ದ ಭಾರತ ಇತರೆ ದೇಶಗಳಿಗೂ ಮಾದರಿಯಾಗಿತ್ತು ಎಂದು ಬೆಂಗಳೂರು ವಿವಿ ಕುಲಪತಿ ಪೆÇ್ರ.ಕೆ.ಆರ್.ವೇಣುಗೋಪಾಲ್ ಅಭಿಪ್ರಾಯಪಟ್ಟರು.
ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಭಾರತಿ ಆವರಣದಲ್ಲಿ ಹಮ್ಮಿಕೊಂಡಿದ್ದ 72ನೇ ಸ್ವಾಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನಮಗೆ ಸ್ವಾತಂತ್ರ್ಯ ಬಂದು 71 ವರ್ಷ ಸಂದಿದೆ. ಆದರೆ ಅದಕ್ಕೂ ಮುನ್ನ ಅಂದರೆ, ಬ್ರಿಟಿಷರ ದಾಸ್ಯಕ್ಕೂ ಹಿಂದೆ ಸಾವಿರಾರು ವರ್ಷ ನಾವು ಸ್ವತಂತ್ರವಾಗಿದ್ದೆವು. ನಮ್ಮ ದೇಶದ 5200 ವರ್ಷಗಳಷ್ಟು ಇತಿಹಾಸ ದಾಖಲೆಯಾಗಿದೆ. ಇಂತಹ ಇತಿಹಾಸವನ್ನು ಅವಲೋಕಿಸಿದಾಗ ನಾವು ಏಕೆ ಈ ಸ್ಥಿತಿಗೆ ಬಂದಿದ್ದೇವೆ ಎಂಬ ಆಲೋಚನೆ ಮೂಡಬೇಕಿದೆ ಎಂದರು.
ಸಾವಿರಾರು ವರ್ಷಗಳ ಹಿಂದಿನಿಂದಲೂ ನಮ್ಮ ದೇಶ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಮೊಟ್ಟಮೊದಲ ವಿಶ್ವವಿದ್ಯಾನಿಲಯವನ್ನು ನಮ್ಮಲ್ಲಿ ಸ್ಥಾಪಿಸಲಾಗಿತ್ತು ಎಂದು ನುಡಿದರು.

ವಿಶ್ವವಿದ್ಯಾನಿಲಯಗಳು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಆಧರಿಸಿದ್ದಾಗಿದೆ. ಪ್ರಸ್ತುತ ವಿದ್ಯಾರ್ಥಿಗಳು ಪದವಿ ಪಡೆಯಲೆಂದು ಮಾತ್ರ ಓದುತ್ತಿದ್ದಾರೆ. ಇದು ವಿಪರ್ಯಾಸದ ಸಂಗತಿ ಎಂದರು.
ಪ್ರಖ್ಯಾತ ನಳಂದಾ ವಿಶ್ವವಿದ್ಯಾನಿಲಯದಲ್ಲಿ 10 ಸಾವಿರ ವಿದ್ಯಾರ್ಥಿಗಳಿಗೆ 2 ಸಾವಿರ ಮಂದಿ ಅಧ್ಯಾಪಕರಿದ್ದರು ಎಂದು ತಿಳಿಸಿದ ಅವರು, ಮುಂದಿನ ವರ್ಷಗಳಲ್ಲಿ ತಂತ್ರಜ್ಞಾನ ಮುಂದುವರೆದಂತೆ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಒಬ್ಬ ಅಧ್ಯಾಪಕರಿರುತ್ತಾರೆ. ಅಷ್ಟು ದೊಡ್ಡ ಮಟ್ಟದಲ್ಲಿ ತಾಂತ್ರಿಕತೆ ಮುಂಚೂಣಿ ಸಾಧಿಸಲಿದೆ ಎಂದು ತಿಳಿಸಿದರು.
ಇಂತಹ ಬೆಳವಣಿಗೆಗಳಿಂದ ವಿದ್ಯಾರ್ಥಿ ಮತ್ತು ಅಧ್ಯಾಪಕರ ನಡುವಿನ ಸಂಬಂಧದಲ್ಲಿ ಬಹಳ ವ್ಯತ್ಯಾಸ ಕಂಡುಬರುತ್ತದೆ. ಹಾಗಾಗಿ ಅಧ್ಯಾಪಕರು ಬಹಳ ಎಚ್ಚರಿಕೆ ವಹಿಸುವಂತೆ ಸಲಹೆ ಮಾಡಿದರು.

ಪ್ರತಿ ದೇಶಕ್ಕೂ ಶಿಕ್ಷಣ, ಆರ್ಥಿಕತೆ, ಅವಶ್ಯಕತೆ ಇರುವಂತೆ ಗುರು ಹಾಗೂ ಸತ್ಯವನ್ನು ಕಾಪಾಡುವುದು ಮುಖ್ಯವಾಗುತ್ತದೆ ಎಂದ ಅವರು, ದೇಶದ ಸ್ವಾತಂತ್ರ್ಯ ಉಳಿಸುವುದು ಅಧ್ಯಾಪಕರ ಕೈಯಲ್ಲಿದೆ. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಇದಕ್ಕಾಗಿ ಶ್ರಮಿಸಿದ ಮಹಾತ್ಮಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಭಗತ್‍ಸಿಂಗ್, ಮೌಲಾನಾ ಅಬ್ದುಲ್ ಆಜಾದ್, ವೀರಸಾವರ್ಕರ್, ಜವಹರಲಾಲ್‍ನೆಹರೂ, ಸುಭಾಷ್‍ಚಂದ್ರಬೋಸ್ ಅವರನ್ನು ನೆನೆಯದಿರಲು ಸಾಧ್ಯವಿಲ್ಲ, ಅವರೇ ನಮ್ಮ ಮಾದರಿ ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು. ವಿಶೇಷವಾಗಿ ಅಂಧ ವಿದ್ಯಾರ್ಥಿಗಳು ದೇಶಭಕ್ತಿಗೀತೆ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಎಲೆಕ್ಟ್ರಿಶಿಯನ್‍ಗಳಿಗೆ ಎಲೆಕ್ಟ್ರಿಕ್ ಟೂಲ್ಸ್‍ಗಳು ಹಾಗೂ ಸುರಕ್ಷತಾ ಕವಚನಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿವಿ ಕುಲಸಚಿವರಾದ ಪೆÇ್ರ.ಡಾ.ಬಿ.ಕೆ.ರವಿ, ಬೆಂಗಳೂರು ವಿವಿ ಮೌಲ್ಯಮಾಪನ ಕುಲ ಸಚಿವ ಪೆÇ್ರ.ಡಾ.ಶಿವರಾಜು, ಸಿಂಡಿಕೇಟ್ ಸದಸ್ಯರು, ಡಾ.ಸುದೇಶ್, ಪೆÇ್ರ.ನಾಡಗೌಡ, ಜಯರಾಮನಾಯಕ್, ಶಿಕ್ಷಕ-ಶಿಕ್ಷಕೇತರರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ