![cricketers](http://kannada.vartamitra.com/wp-content/uploads/2018/08/cricketers-673x381.jpg)
ನವದೆಹಲಿ: 72ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಖ್ಯಾತನಾಮ ಕ್ರಿಕೆಟಿಗರು ದೇಶದ ಜನತೆಗೆ ಶುಭಕೋರಿದ್ದು, ಕ್ರಿಕೆಟಿಗರ ವಿಶೇಷ ಶುಭಾಶಯಗಳ ಸಂದೇಶ ಇಲ್ಲಿದೆ.
ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ತಮ್ಮದೇ ಆದ ಶೈಲಿಯಲ್ಲಿ ಶುಭಕೋರಿರುವ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು, ಸಾಕಷ್ಟು ತ್ಯಾಗ ಬಲಿದಾನಗಳಿಂದ ನಮಗೆ ಸಿಕ್ಕ ಸ್ವತಂತ್ರವನ್ನು ಸ್ವೇಚ್ಛಾಚಾರ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ. ಟ್ವೀಟರ್ ನಲ್ಲಿ ಈ ಬಗ್ಗೆ ಸ್ಫೂರ್ತಿಯುತ ಸಂದೇಶ ರವಾನೆ ಮಾಡಿದ ಸಚಿನ್, ‘ಜೀವನದಲ್ಲಿ ಪ್ರತಿಯೊಂದನ್ನು ಕಷ್ಟಪಟ್ಟು ಸಂಪಾದನೆ ಮಾಡುತ್ತೇವೆ. ಸ್ವತಂತ್ರವೂ ಹಾಗೇ. ಲೆಕ್ಕವಿಲ್ಲದಷ್ಟು ವಿಚಾರಗಳಲ್ಲಿ ಒಂದಾದ ನಮ್ಮ ಟೀಂ ಇಂಡಿಯಾ ಕೂಡಾ ನಮ್ಮ ಸ್ವತಂತ್ರ ಸೇನಾನಿಗಳ ಹೋರಾಟ ಹಾಗು ತ್ಯಾಗವಿಲ್ಲದೇ ಆಗಿಲ್ಲ. ಈ ಸ್ವತಂತ್ರವನ್ನು ನಾವು ಬೇಕಾಬಿಟ್ಟಿ ಬಳಸಿಕೊಳ್ಳಬಾರದು’ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ವೀರೇಂದ್ರ ಸೆಹ್ವಾಗ್ ಅವರು ಶಾಯರಿ ಮೂಲಕ ಶುಭಕೋರಿದ್ದು, ವಿವಿಧ ಕ್ರಿಕೆಟಿಗ ಶುಭಾಶಯಗಳ ಗುಚ್ಚ ಇಲ್ಲಿದೆ.