ಬ್ಲ್ಯಾಕ್‌ಪೂಲ್, ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಮಹಿಳಾ ಸೂಪರ್ ಲೀಗ್ ಟಿ20 ಪಂದ್ಯದಲ್ಲಿ ಭಾರತ ಆಟಗಾರ್ತಿಯರು ಪ್ರಖರ ಪ್ರದರ್ಶನ ನೀಡುತ್ತಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ಪ್ರಿತ್ ಕೌರ್ ಅದ್ಭುತ ಆಟ ಪ್ರದರ್ಶಿಸಿ ತಾವು ಪ್ರತಿನಿಧಿಸುತ್ತಿರುವ ಲಂಕಾಶೈರ್ ಥಂಡರ್ ತಂಡವನ್ನು ಫೈನಲ್ ಹಂತಕ್ಕೆ ಕೊಂಡೊಯ್ದಿದ್ದಾರೆ.
ಇದಕ್ಕೂ ಮುನ್ನ ಭಾರತ ಮಹಿಳಾ ತಂಡದ ಇನ್ನೋರ್ವ ಆಟಗಾರ್ತಿ ಸ್ಮೃತಿ ಮಂದಾನ ಸಹ ಲೀಗ್ ಪಂದ್ಯದಲ್ಲಿ ಅದ್ಭುತ ಆಟವಾಡಿ ದಾಖಲೆ ಸೃಷ್ಟಿಸಿದ್ದರು.
ಯಾರ್ಕ್‌ಶೈರ್ ಡೈಮಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಹರ್ಮನ್ಪ್ರಿತ್ ಕೌರ್ ಕೇವಲ 44 ಎಸೆತಗಳಲ್ಲಿ 74 ರನ್ ಗಳಿಸಿದ್ದಾರೆ. ಇದರಲ್ಲಿ 4 ಬೌಂಡರಿ ಹಾಗೂ 6 ಸಿಕ್ಸರ್ ಗಳು ಸೇರಿದೆ. ಇದರೊಡನೆ ಲಂಕಾಶೈರ್ ತಂಡ ಎದುರಾಳಿ ವಿರುದ್ಧ 9 ರನ್ ಅಂತರದ ಗೆಲುವು ಸಾಧಿಸಿದೆ.
ನಿಧಾನಗತಿ ಬ್ಯಾಟಿಂಗ್ ಪ್ರಾರಂಭಿಸಿದ್ದ ಕೌರ್ ಆರಂಭದ 14 ಬಾಲ್ ಗಳಿಗೆ ಕೇವಲ 12 ರನ್ ಕಲೆಹಾಕಿದರು. ಆದರೆ ಬಳಿಕ ಸ್ಪೋಟಕ ಆಟಕ್ಕಿಳಿದ ಭಾರತೀಯ ಕ್ರಿಕೆಟ್ ತಾರೆ ಕೇವಲ 30 ಬಾಲ್ ಗಳಲ್ಲಿ 62 ರನ್ ಚಚ್ಚಿದ್ದಾರೆ.
ಇನ್ನು ಲಂಕಾಶೈರ್ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿದ್ದರೆ ಯಾರ್ಕ್‌ಶೈರ್ ತಂಡವು ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿ ಒಂಭತ್ತು ರನ್ ಗಳಿಂದ ಸೋಲನುಭವಿಸಿತ್ತು.
ಲಂಕಾಶೈರ್ ತಂಡದ ಪರ ಕೌರ್ ಮತ್ತು ನಿಕೋಲ್ ಬೋಲ್ಟನ್ (46) ಮಾತ್ರವೇ ಉತ್ತಮ ಆಟ ಪ್ರದರ್ಶಿಸಿದ್ದರೆ ಉಳಿದ ಆಟಗಾರರು ಅಷ್ಟೇನೂ ಉತ್ತಮ ಪ್ರದರ್ಶನ ತೊರಿಸಲಿಲ್ಲ.