ಸುದೀಪ್ ಅವರ ಪೈಲ್ವಾನ ಚಿತ್ರದ ಇತ್ತೀಚಿನ ಫೋಟೋವೊಂದು ವೈರಲ್ ಆಗಿದೆ. ಎಸ್ ಕೃಷ್ಣ ನಿರ್ದೇಶನದ ಕ್ರೀಡೆಯಾಧಾರಿತ ಚಿತ್ರವಾದ ಪೈಲ್ವಾನದಲ್ಲಿ ನಟ ಸುದೀಪ್ ಬಾಕ್ಸರ್ ಮತ್ತು ಕುಸ್ತಿಪಟುವಾಗಿ ನಟಿಸುತ್ತಿದ್ದಾರೆ. ಇದಕ್ಕೆ ತಕ್ಕಂತೆ ದೇಹವನ್ನು ಭರಿಸಲು ಸುದೀಪ್ ಅವರು ದೇಹವನ್ನು ಸಾಕಷ್ಟು ಹುರುಗೊಳಿಸಿದ್ದಾರೆ. ಮಾರ್ಷಲ್ ಆರ್ಟ್ಸ್ ನಲ್ಲಿ ಕೂಡ ತರಬೇತಿ ಪಡೆದುಕೊಂಡಿದ್ದಾರೆ.ಈ ಮಧ್ಯೆ ಸುದೀಪ್ ಹಲವು ಪ್ರಾಜೆಕ್ಟ್ ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಚಿರಂಜೀವಿ ನಟನೆಯ ಸಾಯಿ ರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಕೂಡ ನಟಿಸಲಿದ್ದಾರೆ. ಇದೇ 16ರಿಂದ ಹೈದರಾಬಾದಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪೈಲ್ವಾನ ಚಿತ್ರದ ಶೂಟಿಂಗ್ ನಡೆಯಲಿದ್ದು ಅಲ್ಲಿಗೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಕೂಡ ಸೇರಲಿದ್ದಾರೆ. ಪೈಲ್ವಾನ ಮೂಲಕ ಕನ್ನಡ ಚಿತ್ರದಲ್ಲಿ ಮೊದಲ ಬಾರಿಗೆ ಸುನಿಲ್ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ.ರಾಮೋಜಿ ಫಿಲ್ಮ್ ಸಿಟಿಯಲ್ಲಿ 25 ದಿನಗಳ ಶೂಟಿಂಗ್ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಈ ಶೆಡ್ಯೂಲ್ ನಲ್ಲಿ ನಾಯಕಿ ಆಕಾಂಕ್ಷ ಸಿಂಗ್, ರವಿ ಶಂಕರ್, ಕಬಿರ್ ದುಹಾನ್ ಸಿಂಗ್ ಮತ್ತು ಸುಶಾಂತ್ ಸಿಂಗ್ ಅವರ ಭಾಗದ ಚಿತ್ರೀಕರಣ ಕೂಡ ನಡೆಯಲಿದೆ. ಹೈದರಾಬಾದ್ ಮುಗಿದ ಮೇಲೆ ಕರ್ನಾಟಕದ ಒಳ ಪ್ರದೇಶಗಳಲ್ಲಿ ಶೂಟಿಂಗ್ ನಡೆಸಲು ನಿರ್ದೇಶಕರು ತೀರ್ಮಾನಿಸಿದ್ದಾರೆ.ಆರ್ ಆರ್ಆರ್ ಮೋಷನ್ ಪಿಕ್ಸರ್ಸ್ ನಡಿ ತಯಾರಾಗುತ್ತಿರುವ ಪೈಲ್ವಾನ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಕರುಣಾಕರ್ ಅವರ ಛಾಯಾಗ್ರಹಣವಿದೆ.
Seen By: 103 ಪೈಲ್ವಾನ ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ಭರದಿಂದ ಸಾಗುತ್ತಿದೆ. ಚಿತ್ರದ ಪ್ರಮುಖ ಆಕ್ಷನ್ ದೃಶ್ಯ ಮುಗಿದಿದ್ದು ಅದರಲ್ಲಿ ಸುದೀಪ್, ಸುನಿಲ್ ಶೆಟ್ಟಿ, ಶರತ್ [more]
September 3, 2018VDಮನರಂಜನೆComments Off on ವಿಲ್ಲನ್ ಸಿನಿಮಾಗೆ ‘ಎ’ ಸರ್ಟಿಪಿಕೇಟ್: ರಕ್ತಪಾತವಿಲ್ಲದಿದ್ದರೆ ಅದನ್ನು ಫೈಟಿಂಗ್ ಎನ್ನುವುದಿಲ್ಲ- ಪ್ರೇಮ್
Seen By: 312 ಬೆಂಗಳೂರು: ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಮಲ್ಟಿಸ್ಟಾರ್ ಅಭಿನಯದ `ದಿ ವಿಲನ್’ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ ಸಂಕಷ್ಟ ಎದುರಾಗಿದೆ. ಸೆನ್ಸಾರ್ ಮಂಡಳಿ `ದಿ ವಿಲನ್’ ಸಿನಿಮಾ [more]
Seen By: 156 ಬೆಂಗಳೂರು: ಕೆಸಿಸಿ ಕ್ರಿಕೆಟ್ ಕಪ್ ಮುಗಿದಿದ್ದು, ಕೃಷ್ಣ ನಿರ್ದೇಶನಕ ಪೈಲ್ವಾನ್ ಚಿತ್ರದ ಶೂಟಿಂಗ್ ಗೆ ಸುದೀಪ್ ವಾಪಾಸಾಗಿದ್ದಾರೆ. ಸಿನಿಮಾಗೆ ಅಂತಾರಾಷ್ಟ್ರೀಯ ಫೈಟರ್ ಹಾಲಿವುಡ್ ನ [more]