ಗದಗ: ಪ್ರಪಂಚದಲ್ಲಿಯೇ ಅಪರೂಪ ಎನಿಸಿದ ಮಗುವೊಂದು ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಜನಿಸಿದೆ.
ವೈಜ್ಞಾನಿಕವಾಗಿ ಈ ಮಗುವನ್ನು ಸಿರೆನೊಮೆಲಿಯಾ ಎಂದು ಹೇಳಲಾಗುತ್ತದೆ. ಎರಡು ಕಾಲು ಜೊತೆಗೂಡಿ ಒಂದೇ ಆಕಾರದಲ್ಲಿ ಜನಿಸುವ ಈ ಮಕ್ಕಳು ಪ್ರಪಂಚದಲ್ಲಿ ತೀರಾ ವಿರಳವಾಗಿ ಕಾಣಸಿಗುತ್ತವೆ.
ಈ ರೀತಿಯ ಮಗು ಹುಟ್ಟಿದ್ದನ್ನು ಕಂಡು ವೈದ್ಯರು ಕೂಡ ದಿಗ್ಭ್ರಮೆಗೊಂಡಿದ್ದು ಈ ರೀತಿಯ ಮಗು ಬದುಕುವುದು ಕಷ್ಟ ಸಾಧ್ಯ ಎಂದು ಹೇಳಿದ್ದಾರೆ. ಇಲ್ಲಿ ಜನಿಸಿದ ಮಗು ಕೂಡ ಜನಿಸಿದ ಎರಡು ಗಂಟೆಯೊಳಗೆ ಸಾವನ್ನಪ್ಪಿದ್ದು ಮಗುವಿನ ಅಂತ್ಯಸಂಸ್ಕಾರವನ್ನು ಮನೆಯ ಪಾಲಕರು ರಾತ್ರಿಯೇ ನೆರವೇರಿಸಿದ್ದಾರೆ.