ಬೆಂಗಳೂರು, ಆ.14-ಗೆಜ್ಜೆ ಹೆಜ್ಜೆ ರಂಗ ತಂಡದ ವತಿಯಿಂದ 72ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಾಟಕ ಪ್ರದರ್ಶನ, ನಾಟಕ ಕೃತಿ ಲೋಕಾರ್ಪಣೆ, ರಂಗಗೀತೆಗಳು, ಏಕಪಾತ್ರ ಅಭಿನಯ ಮತ್ತು ಮೌನಾಭಿನಯ ಕಾರ್ಯಕ್ರಮ ನಾಳೆ ದಿನವಿಡಿ ನಗರದ ಚಾಮರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್‍ನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಧ್ಯಕ್ಷತೆಯನ್ನು ರಂಗ ತಂಡದ ಅಧ್ಯಕ್ಷರಾದ ಗಾಯಿತ್ರಿ ದೇವಿ ವಹಿಸಲಿದ್ದು, ಹಿರಿಯ ನಾಟಕಕಾರದ ಹೊರೆಯಾಲ ದೊರೆಸ್ವಾಮಿ ಕೃತಿ ಲೋಕಾರ್ಪಣೆ ಮಾಡುವರು ಹಾಗೂ ವಿನೂತನವೂ ವಿಡಂಬನಾತ್ಮಕವೂ ಆದ ಮೈಸೂರು ರಮುನಂದ್ ವಿರಚಿತ ಸಂಚಾರಾಯಣ ನಾಟಕ ಕೃತಿ ಲೋಕಾರ್ಪಣೆ ಆಗಲಿದೆ.
ಎನ್.ಎಸ್.ರಾವ್ ವಿರಚಿತ ರೊಟ್ಟಿ ಋಣ ನಾಟಕ ಪ್ರದರ್ಶನವು ಮಧ್ಯಾಹ್ನ 2ಕ್ಕೆ ನಡೆಯಲಿದೆ. ಜತೆಗೆ ಮಧ್ಯೆ ಮಧ್ಯೆ ರಂಗ ಗೀತೆಗಳು ಮೌನಾಭಿನಯದ ಪ್ರದರ್ಶನ ಸಹ ನಡೆಯಲಿವೆ.
ಚಲನಚಿತ್ರ ನಿರ್ದೇಶಕರಾದ ಬಿ.ಸುರೇಶ್, ಸಂಗೀತ ನಿರ್ದೇಶಕ ವಿ.ಮನೋಹರ್, ನಗರ ಕಸಾಪ ಅಧ್ಯಕ್ಷ ಮಾಯಣ್ಣ, ಕಲಾಪೆÇೀಷಕ ನಾಗಭೂಷಣ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ರಂಗಕರ್ಮಿ ಜಗನ್ನಾಥರಾವ್ ಸಾರಥ್ಯದಲ್ಲಿ ಸಂಜೆ 7ಕ್ಕೆ ಹೆಸರಾಂತ ಸಾಹಿತಿ ಯಂಡಮೂರಿ ವೀರೇಂದ್ರನಾಥ ಅವರ ನಿಳ್ಗತೆಯನ್ನು ಆಧರಿಸಿದ ಮನುಷ್ಯರು ಬರುತ್ತಿದ್ದಾರೆ ಜಾಗೃತಿ ನಾಟಕ ಪ್ರದರ್ಶನವೂ ನೆರವೇರಲಿದೆ.