ವಾಯು ಮಾಲಿನ್ಯದಲ್ಲಿ ದೆಹಲಿಯನ್ನೂ ಹಿಂದಿಕ್ಕಿದ ಬೆಂಗಳೂರು

 

ಬೆಂಗಳೂರು, ಆ.13-ಉದ್ಯಾನ ನಗರಿ ಈಗ ದೇಶದ ರಾಜಧಾನಿಯನ್ನು ವಾಯು ಮಾಲಿನ್ಯದಲ್ಲಿ ಹಿಂದಿಕ್ಕಿದೆ. ವಾಯು ಪ್ರದೂಷಣದಲ್ಲಿ ಬೆಂಗಳೂರು, ದೆಹಲಿಗಿಂತ ಅಧ್ವಾನ ಎಂಬ ಆತಂಕಕಾರಿ ಸಂಗತಿ ಬಯಲಾಗಿದ್ದು, ಇದು ಸಿಲಿಕಾನ್ ಕಣಿವೆಗೆ ಮತ್ತೊಂದು ಕಪ್ಪು ಚುಕ್ಕೆಯಾಗಿದೆ.
ಏರ್ ಪೆÇಲ್ಯೂಷನ್‍ನಲ್ಲಿ ಇದೀಗ ಬೆಂಗಳೂರು ನವದೆಹಲಿಯನ್ನು ಮೀರಿಸಿರುವ ಅಂಶವನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಯನದಿಂದ ಬಹಿರಂಗವಾಗಿದೆ. ಭಾರತದ ಆರು ಅಗ್ರ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೂ ಎರಡನೇ ಸ್ಥಾನ ಲಭಿಸಿರುವುದು ಪರಿಸರ ಪ್ರಿಯರಲ್ಲಿ ಆತಂಕ ಮೂಡಿಸಿದೆ.

ನಗರಗಳ ಹೊರವಲಯಗಳಲ್ಲಿ ಕೈಗಾರಿಕೆಗಳ ಸಂಖ್ಯೆ ಹೆಚ್ಚಳ, ಕಾರ್ಖಾನೆಗಳು ಹೊರಸೂಸುತ್ತಿರುವ ಮಲಿನ ಹಾಗೂ ಡಿಸೇಲ್ ಜನರೇಟರ್‍ಗಳ ಸಂಖ್ಯೆ ಹೆಚ್ಚಳ ವಾಯು ಮಾಲಿನ್ಯ ಹೆಚ್ಚಾಗಲು ಪ್ರಮುಖ ಕಾರಣ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.
ಧೂಳುಮಯ ರಸ್ತೆಗಳು ಹಾಗೂ ಅಸಂಖ್ಯಾತ ವಾಹನಗಳು ಉಗುಳುವ ಹೊಗೆಗಳಿಂದಾಗಿ ದೇಶದಲ್ಲೇ ಅತ್ಯಧಿಕ ವಾಯು ಮಾಲಿನ್ಯದ ನಗರಗಳಲ್ಲಿ ಉದ್ಯಾನನಗರಿಗೆ ಎರಡನೇ ಸ್ಥಾನ ಲಭಿಸಿದೆ. ಮೊದಲ ಸ್ಥಾನದಲ್ಲಿ ಪುಣೆ ಇದ್ದು, ದೆಹಲಿ ಮೂರನೇ ಸ್ಥಾನಕ್ಕೆ ಇಳಿದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷಣ್, ಈ ಅಧ್ಯಯನ ವರದಿ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ವರದಿಯಲ್ಲಿ ತಿಳಿಸಿರುವಂತೆ ಬೆಂಗಳೂರು ಹೊರವಲಯದಲ್ಲಿ ಅಷ್ಟೊಂದು ಕೈಗಾರಿಕೆಗಳಿಲ್ಲ ಎನ್ನುವುದು ಅವರ ವಾದ.
ಇದು ನಿಖರ ಅಂಕಿ ಅಂಶ ಎಂಬ ಬಗ್ಗೆ ಸಂದೇಹವಿದೆ. ಇದನ್ನು ಕೂಲಂಕಷವಾಗಿ ಪರಿಶೀಲಿಸುತ್ತೇವೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ