ಪುಣೆ ದೇಶದ ಅತ್ಯುತ್ತಮ ವಾಸಯೋಗ್ಯ ನಗರ: ಕೇಂದ್ರ ಸರಕಾರ ವರದಿ

ಹೊಸದಿಲ್ಲಿ: ಮಹಾರಾಷ್ಟ್ರದ ಪುಣೆದೇಶದ ಅತ್ಯುತ್ತಮ ವಾಸಯೋಗ್ಯ ನಗರ ಎಂದು ನಗರ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿದ ವಾಸಯೋಗ್ಯ ನಗರಗಳ ಸೂಚ್ಯಂಕಹೇಳಿದೆ.

ಟಾಪ್‌ 10 ಪಟ್ಟಿಯಲ್ಲಿ ಮಹಾರಾಷ್ಟ್ರದ 3 ನಗರಗಳು ಸ್ಥಾನ ಪಡೆದಿವೆ. ಪುಣೆ ನಂತರದ ಸ್ಥಾನದಲ್ಲಿ ನವಿ ಮುಂಬಯಿ ಮತ್ತು ಗ್ರೇಟರ್ ಮುಂಬಯಿ ಇದ್ದು, ಸಮೀಕ್ಷೆಗೆ ಒಳಪಡಿಸಿದ 111 ನಗರಗಳ ಪೈಕಿ ಉತ್ತರ ಪ್ರದೇಶದ ರಾಂಪುರ ಕೊನೆಯ ಸ್ಥಾನ ಪಡೆದಿದೆ. ರಾಷ್ಟ್ರರಾಜಧಾನಿ ದಿಲ್ಲಿಗೆ 65ನೇ ಸ್ಥಾನ ಲಭ್ಯವಾಗಿದ್ದರೆ, ಕೋಲ್ಕತಾ ಮಾತ್ರ ಸ್ಪರ್ಧೆಯಿಂದ ಹೊರಗುಳಿದಿತ್ತು.

ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಹೆಚ್ಚಿನ ಸಂಖ್ಯೆಯ ದೊಡ್ಡ ನಗರಗಳಿದ್ದರೂ, ಅವುಗಳನ್ನು ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಇದೇ ಮೊದಲ ಬಾರಿಗೆ ವಾಸಯೋಗ್ಯ ನಗರಗಳ ಸೂಚ್ಯಂಕ ಪ್ರಕಟಿಸಿದೆ.

ಚೆನ್ನೈ 14 ಸ್ಥಾನ ಪಡೆದಿದ್ದರೆ ದೆಹಲಿ 65 ಸ್ಥಾನ ಪಡೆದಿದ್ದು, ಉತ್ತರ ಪ್ರದೇಶದ ರಾಂಪುರ್ ಕೊನೆಯ ಸ್ಥಾನ ಪಡೆದಿದೆ.
ದೇಶದ ನಗರಗಳು ಎಷ್ಟರ ಮಟ್ಟಿಗೆ ವಾಸ ಯೋಗ್ಯವಾಗಿವೆ ಎಂಬುದನ್ನು ಅಲ್ಲಿನ ಆಡಳಿತ, ಸಾಮಾಜಿಕ ಸಂಸ್ಥೆಗಳು, ಆರ್ಥಿಕ ಮತ್ತು ಮೂಲಸೌಕರ್ಯ ಪ್ರಮುಖ ನಾಲ್ಕು ಮಾನದಂಡಗಳ ಮೂಲಕ ನಿರ್ಧರಿಸಲಾಗಿದೆ ಎಂದು ಪುರಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ