
ಮೈಸೂರು,ಆ.12-ಕಪಿಲ ನದಿ ತುಂಬಿ ಹರಿಯುತ್ತಿದ್ದು ಯಾವುದೇ ರೀತಿಯ ಅನಾಹುತ ಸಂಭವಿಸಬಾರದೆಂದು ಪ್ರವಾಸಿಗರಿಬ್ಬರು ಹೋಮ-ಹವನ ನೆರವೇರಿಸುವ ಮೂಲಕ ದೇವರ ಮೊರೆ ಹೋಗಿದ್ದಾರೆ.
ಇಂದು ಬೆಳಗ್ಗೆ ನಂಜನಗೂಡಿನ ಪರಶುರಾಮ ದೇವಸ್ಥಾನದಲ್ಲಿ ತಮಿಳುನಾಡಿನಿಂದ ಬಂದ ಪ್ರವಾಸಿಗರು ಮೊದಲು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಸ್ಥಳೀಯ ಪುರೋಹಿತರ ನೆರವಿನೊಂದಿಗೆ ಹೋಮಹವನ ನೆರವೇರಿಸಿದ್ದಾರೆ.
ಕಪಿಲಾ ನದಿ ತುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿ ಉಂಟಾಗಿರುವುದರಿಂದ ಯಾರಿಗೂ ತೊಂದರೆಯಾಗದಿರಲಿ ಎಂದು ಪ್ರಾರ್ಥಿಸಿ ತಮಿಳುನಾಡಿನಿಂದ ಬಂದಿದ್ದ ಇಬ್ಬರು ಪ್ರವಾಸಿಗರು ಹೋಮಹವನ ನಡೆಸಿದರು.
ಕಪಿಲ ನದಿ ತುಂಬಿ ಹರಿಯುತ್ತಿದ್ದನ್ನು ನೋಡಿ ಪ್ರವಾಸಿಗರು ಕಣ್ತುಂಬಿಕೊಂಡರು.