ಲಂಡನ್ : ಟೀಂ ಇಂಡಿಯಾದ ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ ಪೂಜಾರ ನಿನ್ನೆ ಆಂಗ್ಲರ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ ರನೌಟ್ ಆಗುವ ಮೂಲಕ ಟೆಸ್ಟ್ ನಲ್ಲಿ ಅತಿ ಹೆಚ್ಚು ಬಾರಿ ರನೌಟ್ ಆದ ಬ್ಯಾಟ್ಸ್ ಮನ್ ಎಂಬ ಅಪಖ್ಯಾತಿಗೆ ಗುರಿಯಾಗಿದ್ದಾರೆ. ಲಾರ್ಡ್ಸ್ ಅಂಗಳದಲ್ಲಿ ನಡೆದ ಎರಡನೇ ದಿನದಾಟದ ಪಂದ್ಯದಲ್ಲಿ ಒಂದನೇ ಕ್ರಮಾಂಕದಲ್ಲಿ ಆಡಿದ ಚೇತೇಶ್ವರ ಪೂಜಾರ ನಾಯಕ ವಿರಾಟ್ ಕೊಹ್ಲಿ ಜೊತೆ ಆಡುವಾಗ ಅನಗತ್ಯ ರನ್ ಕದಿಯಲು ಹೋಗಿ ರನೌಟ್ ಬಲೆಗೆ ಬಿದ್ರು. ಇದರೊಂದಿಗೆ ಟೆಸ್ಟ್ ನಲ್ಲಿ ತಮಗೆ ಬೇಡವಾದ ದಾಖಲೆಯೊಂದನ್ನ ಬರೆದ್ರು. ನಿನ್ನೆ 41ನಿಮಿಷಗಳ ಕಾಲ ಆಡಿದ ಪೂಜಾರ 25 ಎಸೆತ ಎದುರಿಸಿ ಗಳಿಸಿದ್ದು ಕೇವಲ 1 ರನ್ ಕಳೆದ 10 ವರ್ಷಗಳಲ್ಲಿ ಪೂಜಾರ ಎಂಟನೆ ಬಾರಿ ರನೌಟಾದ ದಾಖಲೆ ಬರೆದ್ರು. ಇಂಗ್ಲೆಂಡ್ ತಂಡದ ಮ್ಯಾಟ್ ಪ್ರಿಯರ್, ಶ್ರೀಲಂಕಾ ತಂಡದ ರಂಗನಾ ಹೆರತ್, ಆಸೀಸ್ ನ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್ ಮತ್ತು ನ್ಯೂಜಿಲೆಂಡ್ನ ರಾಸ್ ಟೇಲರ್ ಅವರುಗಲ ದಾಖಲೆ ಸರಿಗಟ್ಟಿದ್ರು. ಇತ್ತೀಚೆಗೆ 13 ರನೌಟ್ಗಳ ಪೈಕಿ 8 ಬಾರಿ ಪೂಜಾರ ತಂಡದಲ್ಲಿ ಅತಿ ಹೆಚ್ಚು ಬಾರಿ ರನೌಟ್ ಆಗಿದ್ದಾರೆ. ಕಳೆದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚೂರಿಯನ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಒಂದೇ ಪಂದ್ಯದಲ್ಲಿ ಎರಡು ಇನ್ನಿಂಗ್ಸ್ಗಳಲ್ಲೂ ರನೌಟ್ ಆಗಿ ಅಚ್ಚರಿ ಮೂಡಿಸಿದ್ದರು.