ನವದೆಹಲಿ : ಸತತ ಐದನೇ ತಿಂಗಳು ಏರ್ ಇಂಡಿಯಾ ನೌಕರರ ಸಂಬಳ ನೀಡುವಲ್ಲಿ ವಿಳಂಬವಾಗಿದೆ. ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರು ಜುಲೈ ತಿಂಗಳಿನ ಸಂಬಳವನ್ನು ಇನ್ನೂ ಪಡೆದುಕೊಂಡಿಲ್ಲ.ಸಂಬಳ ವಿಳಂಬದಿಂದ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಭಾರತೀಯ ವಾಣಿಜ್ಯ ಪೈಲಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ದೀಪಂಕರ್ ಗುಪ್ತಾ ಏರ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.ಸತತ ಐದನೇ ತಿಂಗಳು ಕೂಡಾ ಸಂಬಳದಲ್ಲಿ ವಿಳಂಬವಾಗಿದೆ. ನಿಮ್ಮಿಂದ ಸ್ಪಷ್ಟೀಕರಣ ಮತ್ತು ಭರವಸೆ ನೀಡಿದ ನಂತರವೂ ನೌಕರರಿಗೆ ನಿಗದಿತ ಅವಧಿಯಲ್ಲಿ ಸಂಬಳ ಹಾಗೂ ಭತ್ಯೆ ನೀಡುವಲ್ಲಿ ಆಡಳಿತ ಸಂಸ್ಥೆ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.ಸಂಬಳ ವಿಳಂಬದಿಂದಾಗಿ ನೌಕರರು ಹಣಕಾಸು ಸಂಸ್ಥೆಗಳಿಂದ ಹಣ ಸಾಲ ಪಡೆದು ತೊಂದರೆ ಎದುರಿಸುವಂತಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.