ನಾಟಿ ಬಳಿಕ ರೈತರೊಂದಿಗೆ ಮುದ್ದೆ ಊಟ; ಸಿಎಂಗಾಗಿ ಸಿದ್ಧವಾಗಿದೆ ಮೆನ್ಯೂ!

ಮಂಡ್ಯ: ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಇಂದು ರೈತನಾಗಿ ಮಂಡ್ಯದ ಸೀತಾಪುರದಲ್ಲಿ ಭತ್ತದ ನಾಟಿ ಮಾಡಲಿದ್ದಾರೆ. ಅದಕ್ಕಾಗಿ ಸಿಎಂಗಾಗಿ ಗ್ರಾಮದಲ್ಲಿ ಎಲ್ಲ ಸಿದ್ಧತೆಯಾಗಿದೆ.

ಸಿಎಂ ಜೊತೆ ರೈತರು, ಶಾಸಕರು, ಸಚಿವರು ಹಾಗೂ ಹಲವು ಗಣ್ಯರು ಗದ್ದೆಗೆ ಇಳಿಯಲಿದ್ದಾರೆ. ಈಗಾಗಲೇ ಮಳವಳ್ಳಿ ಶಾಸಕ ಅನ್ನದಾನಿ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಅವರು ಪಂಚೆ ಕಟ್ಟಿಕೊಂಡು ಜಮೀನಿಗೆ ಬಂದಿದ್ದಾರೆ.
ನಾಟಿ ಬಳಿಕ ಜಮೀನಿನಲ್ಲೇ ಸಹಭೋಜನ:
‌ನಾಟಿ ಬಳಿಕ ರೈತರೊಂದಿಗೆ ಸಿಎಂ ಸಹಭೋಜನ ಸವಿಯಲಿದ್ದಾರೆ. ಅದಕ್ಕಾಗಿಯೇ ಮುದ್ದೆ, ಮೊಳೆಕೆ ಕಾಳು ಸಾಂಬಾರ್, ಸೊಪ್ಪಿನ ಪಲ್ಯ, ಬಿಳಿ ಅನ್ನ ಸಿದ್ಧಪಡಿಸಲಾಗಿದೆ.
ಜಮೀನಿನ ರೈತ ದೇವರಾಜು ಮನೆಯಲ್ಲಿ ಊಟ ಸಿದ್ಧವಾಗಿದ್ದು, 100 ರಿಂದ 150  ರೈತರು ಸಹಭೋಜನದಲ್ಲಿರಲಿದ್ದಾರೆ. ಸಾಮಾನ್ಯ ರೈತರ ಜೊತೆ ನಾಡಿನ‌ ಸಿಎಂ ಊಟ ಮಾಡ್ತಿರೋದಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಜಾನಪದ ಸೊಬಗು:
ಸಿಎಂ ನಾಟಿ ಮಾಡುವ ವೇಳೆ ಜಾನಪದ ಸೊಬಗು ಕೇಳಿಬರಲಿದೆ. ನಾಟಿ ಕಾರ್ಯದಲ್ಲಿ ಭಾಗವಹಿಸುವರಿಗೆ ಶ್ರಮವಾಗದಿರಲೆಂದು ಜಾನಪದ  ಗೀತೆ‌ಗಳು ಮೊಳಗಲಿವೆ.
ಪಾಂಡವಪುರ ತಾಲೂಕಿನ ಹೆಗ್ಗಡಹಳ್ಳಿಯ ಸೋಬಾನೆ ಕೃಷ್ಣೇಗೌಡ ತಂಡದಿಂದ ನಾಟಿ ಗೀತೆಗೆ ಸಿದ್ಧತೆ ನಡೆದಿದೆ. ನಾಟಿ ಕಾರ್ಯಕ್ಕೂ ಮೊದಲು ಸೀತಾಪುರ ಗ್ರಾಮದ ಕಾವೇರಿ ನದಿಯ ಬಳಿಯ ಹೊಳೆಕೆರೆ ಆಂಜನೇಯ ದೇವಸ್ಥಾನದಲ್ಲಿ ಸಿಎಂ ಪೂಜೆ ಸಲ್ಲಿಸಲಿದ್ದಾರೆ.

ಊಟದ ಮಾಹಿತಿ:
ಮುದ್ದೆ, ಚಪಾತಿ, ಹುರಳಿಕಟ್ಟು ಸಾಂಬಾರ್, ಹುರಳಿಕಾಳು ಸೊಪ್ಪಿನ ಪಲ್ಯ, ಮೊಸಪ್ಪು, ಮಡ್ರಾಸ್ ರಸಂ, ರೈಸ್, ಇರಳೆಕಾಯಿ ಚಿತ್ರನ್ನ, ಇರಳೆಕಾಯಿ ಉಪ್ಪಿನಕಾಯಿ, ಹೆಸರುಬೆಳೆ ಪಾಯಸ, ಹುರಳಿ, ಹಪ್ಪಳ, ಹಸಿ ಅವರೆಕಾಳು ಕೂಟು, ನಂಜನಗೂಡು ರಸಬಾಳೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ