ಬೆಂಗಳೂರು, ಆ.11-ತುಳುವೆರೆಂಕುಲು ಸಂಸ್ಥೆಯು ರಾಜಧಾನಿಯ ಪ್ರಮುಖ ಸಕ್ರಿಯ ತೌಳವ ಸಂಘಟನೆಯಾಗಿದ್ದು, ತುಳುನಾಡಿನ ಸಾಂಸ್ಕøತಿಕ, ಸಾಮಾಜಿಕ, ಸಾಹಿತ್ಯಗಳ ಹಿರಿಮೆಗರಿಮೆಗಳ ಆಚರಣೆ, ಪ್ರಸಾರಣೆ ಹಾಗೂ ಆರಾಧನೆ ಮಾಡುತ್ತಾ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ.
ನಾಳೆ ಆಗಸ್ಟ್ 12 ರಂದು ಬಿಳೇಕಹಳ್ಳಿಯ ಎಂ.ಎಸ್.ಆರ್ ನಗರದ ಮುಲ್ಕಿ ಸುಂದರ್‍ರಾಮ್‍ಶೆಟ್ಟಿ ಸಭಾಂಗಣದಲ್ಲಿ ಆಟಿಡೊಂಜಿ ಕೂಟ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎ.ಸಿ.ಭಂಡಾರಿರವರು ಗಣ್ಯ ಅತಿಥಿಗಳ ಸಮಕ್ಷಮದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಅಂದು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಹಾಗೂ ವಿಶೇಷ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವಿವಿಧ ಬಹುಮಾನಗಳನ್ನು ವಿತರಿಸಲಾಗುವುದು.
ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ ಹಾಗೂ ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್‍ನ ಅಧ್ಯಕ್ಷರಾದ ಪಿ.ಸಿ.ರಾವ್ ಅವರನ್ನು ಸನ್ಮಾನಿಸಲಾಗುವುದು. ಡಾ.ಉದಯ ಧರ್ಮಸ್ಥಳರವರು ಆಟಿಯ ವಿಶೇಷತೆ ಬಗ್ಗೆ ಮಾತನಾಡಲಿದ್ದಾರೆ.