ಬೆಂಗಳೂರು, ಆ.11-ಶ್ರೀ ಪದ್ಮರಾಜ್ ಸಾಂಸ್ಕøತಿಕ ಸಾಮಾಜಿಕ ಕ್ರೀಡಾ ಯುವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಇಂದು ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್ಗಳ ವಿತರಣೆ ಹಾಗೂ ಬಸವೇಶ್ವರ ನಗರ ವಾರ್ಡ್ನಲ್ಲಿ ಫಲಾನುಭವಿಗಳಿಗೆ ವಿವಿಧ ಪರಿಕರಗಳನ್ನು ನೀಡಲಾಯಿತು.
ಬಸವೇಶ್ವರ ನಗರದ ಸಾಣೆಗೊರವನಹಳ್ಳಿಯ ಪಾಲಿಕೆ ಮಾಜಿ ಸದಸ್ಯ ಎಸ್.ಎಸ್.ಪದ್ಮರಾಜ್ ಅವರ ಗೃಹ ಕಚೇರಿ ಬಳಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಿರು ಅರಣ್ಯ ಸ್ಥಾಪನೆಯ ವಾರ್ಷಿಕೋತ್ಸವ, ವಾರ್ಡ್ನ ಮಹಿಳೆಯರಿಗೆ ಸೀರೆ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಪಾಲಿಕೆ ಸದಸ್ಯರಾದ ಉಮಾವತಿ ಪದ್ಮರಾಜ್, ಸ್ಥಳೀಯ ಬಿಜೆಪಿ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸದಸ್ಯರ ಅನುದಾನದಡಿ ಹೊಲಿಗೆ ಯಂತ್ರ, ಬೈಸಿಕಲ್ಗಳನ್ನು ಫಲಾನುಭವಿಗಳಿಗೆ ವಿತರಿಸಿದರು.
ಇದೇ ಸಂದರ್ಭದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ವಾರ್ಡ್ನ ಹಿರಿಯ ನಾಗರಿಕರು ಮಹಿಳೆಯರು, ಮಕ್ಕಳು ಪಾಲ್ಗೊಂಡು ಆರೋಗ್ಯ ತಪಾಸಣೆಗೊಳಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಪದ್ಮರಾಜ್ ಅವರು, ನಮ್ಮ ವೇದಿಕೆ ವತಿಯಿಂದ ಕಳೆದ 14 ವರ್ಷಗಳಿಂದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗಾಗಿ ಉಚಿತ ನೋಟ್ಬುಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದೇವೆ. ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇವೆ ಎಂದು ಹೇಳಿದರು.
ಅಧಿಕಾರದಲ್ಲಿ ಇರಲಿ, ಬಿಡಲಿ ಈ ಸಮಾಜಸೇವೆಯನ್ನು ಮುಂದುವರೆಸಿಕೊಂಡು ಹೋಗುವುದಾಗಿ ಪದ್ಮರಾಜ್ ಹೇಳಿದರು.