ನೆಹರು ದನ ಹಾಗೂ ಹಂದಿ ಮಾಂಸ ತಿನ್ನುತ್ತಿದ್ದರು; ಅವರು ಪಂಡಿತರಲ್ಲ: ಬಿಜೆಪಿ ಶಾಸಕ

ನವದೆಹಲಿ:ಆ-11: ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಪಂಡಿತರಲ್ಲ. ಅವರು ದನ ಹಾಗೂ ಹಂದಿ ಮಾಂಸ ತಿನ್ನುತ್ತಿದ್ದರು ಎಂದು ರಾಜಸ್ಥಾನದ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಮುಖ್ಯ ಕಚೇರಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ನೆಹರು ಅವರ ಹೆಸರಿನ ಜತೆ ಸೇರಿಕೊಂಡಿರುವ ಪಂಡಿತ್ ಪದ ಉಲ್ಲೇಖಿಸಿ, ಅವರು ದನ ಹಾಗೂ ಹಂದಿ ಮಾಂಸ ತಿನ್ನುವವರು ಪಂಡಿತರಾಗಲು ಸಾಧ್ಯವಿಲ್ಲ ಎಂದಿದ್ದಾರೆ.

ಅಲ್ಲದೇ ಕಾಂಗ್ರೆಸ್ ಪಕ್ಷವು ಜಾತಿಯನ್ನು ಮುಂದಿಟ್ಟುಕೊಂಡು 2019ರ ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗುತ್ತಿದೆ ಎಂದು ಆರೋಪಿಸಿದ್ದಾರೆ.

ರಾಜಸ್ಥಾನದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಚಿನ್ ಪೈಲಟ್ಸ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಅಹುಜಾ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದಿರಾ ಗಾಂಧಿ ಜತೆ ದೇವಾಲಯಗಳಿಗೆ ಭೇಟಿ ನೀಡುತ್ತಿರಲಿಲ್ಲ. ನನ್ನ ಈ ಮಾತು ತಪ್ಪಾದಲ್ಲಿ ನಾನು ನನ್ನ ಸ್ಥಾನದಿಂದ ಕೆಳಗಿಳಿಯುತ್ತೇನೆ ಹಾಗೂ ಸಚಿನ್ ಅವರು ಸಹ ತಮ್ಮ ಸ್ಥಾನ ತೊರೆಯಬೇಕು ಎಂದು ಹೇಳಿದರು.

ರಾಹುಲ್ ಗಾಂಧಿ ಅವರು ಇಂದಿರಾ ಗಾಂಧಿ ಜತೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು ಎಂದು ಸಚಿನ್ ಪೈಲಟ್ ಹೇಳಿದ್ದರು.

ಸಂಪ್ರದಾಯ‌ದ ಪ್ರಕಾರ ಯೋಗ್ಯ ಪವಿತ್ರ (yagyopaveet) ಸಂಸ್ಕಾರವಾದ ಮೇಲೆ ಜನಿವಾರ ಹಾಕಬೇಕು. ರಾಹುಲ್ ಗಾಂಧಿ ಅವರಿಗೆ ‘ಯೋಗ್ಯ ಪವಿತ್ರ‘ ಸಂಸ್ಕಾರ ಯಾವಾಗ ಆಗಿತ್ತು? ಎಂದು ಅಹುಜಾ ಅವರು ಸಚಿನ್ ಪೈಲಟ್, ಅಶೋಕ್‌ ಗೆಹ್ಲೋಟ್ ಮತ್ತು ಗುಲಾಮ್ ನಭಿ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಈ ಮೂವರಲ್ಲಿ ಯಾರಾದರು ಉತ್ತರಿಸಲಿ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ