ಬೆಂಗಳೂರು, ಆ.10-ದೇಶದಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಸಿಗಬೇಕು, ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಬೇಕು ಎಂದು ಬಿಎಂಎಸ್ ಶೈಕ್ಷಣಿಕ ಟ್ರಸ್ಟ್‍ನ ಟ್ರಸ್ಟಿ ಡಾ.ಪಿ.ದಯಾನಂದ ಪೈ ಹೇಳಿದರು.
ಬಿಎಂಎಸ್ ಮಹಿಳಾ ಪದವಿ ಕಾಲೇಜು ವತಿಯಿಂದ ಏರ್ಪಡಿಸಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸದಾ ಸಕಾರಾತ್ಮಕವಾಗಿ ಚಿಂತನೆ ಮಾಡಬೇಕು, ಉತ್ತಮ ಧ್ಯೇಯಗಳನ್ನು ಇಟ್ಟುಕೊಳ್ಳಬೇಕು. ಒಳ್ಳೆಯ ನಾಗರಿಕರಾಗಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅರಿತು ಬಾಳಿದರೆ ಶೃಂಗಾರ, ಬೆರೆತು ಬಾಳಿದರೆ ಬಂಗಾರ. ಈ ಮೂಲಕ ಜೀವನ ಸಾಕ್ಷಾತ್ಕಾರ ಮಾಡಬೇಕು ಎಂದು ಹೇಳಿದರು.
ಹೆಣ್ಣು ಮಕ್ಕಳಿಗೆ ತಾಯಿಯಂತೆ ಗೌರವ ನೀಡಬೇಕು. ವಿದ್ಯಾಭ್ಯಾಸವೊಂದರಿಂದಲೇ ಎಲ್ಲ ರೀತಿಯ ಬೆಳವಣಿಗೆ ಸಾಧ್ಯವಾಗಲಾರದು. ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಹೆಣ್ಣೊಂದು ಕಲಿತರೆ ಕುಟುಂಬವೇ ಕಲಿತಂತೆ. ಹಾಗಾಗಿ ಹೆಣ್ಣು ಮಕ್ಕಳು ಹೆಚ್ಚು ವಿದ್ಯಾವಂತರಾಗಬೇಕು ಎಂದು ಕರೆ ನೀಡಿದರು.
ಬಿಗ್‍ಬಾಸ್ ಖ್ಯಾತಿಯ ಪ್ರಥಮ್ ಮಾತನಾಡಿ, ಪಿಯುಸಿ ಮತ್ತು ಪದವಿ ಪ್ರಮುಖ ಘಟ್ಟವಾಗಿದ್ದು, ಉತ್ತಮ ವ್ಯಾಸಂಗ ಮಾಡುವಂತೆ ಸಲಹೆ ನೀಡಿದರು.
ಪೆÇೀಷಕರು ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ದೇಶದ ಆಸ್ತಿಯನ್ನಾಗಿ ಮಾಡಿ ಎಂದು ತಿಳಿಸಿದರು.
ವಿದ್ಯೆ, ಜ್ಞಾನಾರ್ಜನೆಗೆ ಬೇಕಿರುವುದು ಬುದ್ಧಿವಂತಿಕೆ. 1964ರಲ್ಲಿ ಪ್ರಾರಂಭವಾದ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ 34 ಮಂದಿ ವಿದ್ಯಾರ್ಥಿನಿಯರಿದ್ದರು. ಪ್ರಸ್ತುತ 3 ಸಾವಿರ ಇರುವುದು ಸಂತಸದ ವಿಷಯ ಎಂದು ಹೇಳಿದರು.
ಆಕಾಶವಾಣಿ ಗಾಯಕಿ ಸೀಮಾರಾಯ್ಕರ್, ಮಿಸ್ ಇಂಡಿಯಾ ಸೌತ್ 2018ರ ಸ್ಪರ್ಧಿ ಶರಣ್ಯಾ ಶೆಟ್ಟಿ, ಬಿಎಂಎಸ್ ಮಹಿಳಾ ಪದವಿ ಕಾಲೇಜಿನ ಅಧ್ಯಕ್ಷೆ ಡಾ.ರಾಗಿಣಿ ನಾರಾಯಣ್, ಪಿಯು ಕಾಲೇಜಿನ ಪ್ರಾಂಶುಪಾಲರಾದ ಬಿ.ಪದ್ಮಾ ಮತ್ತಿತರರು ಪಾಲ್ಗೊಂಡಿದ್ದರು.
ಕ್ರೀಡೆ, ಸಾಂಸ್ಕøತಿಕ, ಸಾಮಾಜಿಕ ಸೇರಿದಂತೆ ಇತರೆ ವ್ಯಕ್ತಿತ್ವ ವಿಕಸನ ಕಾರ್ಯಗಳಲ್ಲಿ ತೊಡಗಿಕೊಂಡ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.