ಹುಬ್ಬಳ್ಳಿ- ಮಹದಾಯಿ ಹೋರಾಟಗಾರು ದಯಾಮರಕ್ಕೆ ಒತ್ತಾಯಿಸಿ ಬೆಂಗಳೂರು ಚೇಲೋ ಹೋರಾಟ ಹಮ್ಮಿಕೊಂಡಿದ್ದು, ಇಂದು ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳಿಸಿದರು. ಮಹದಾಯಿ ನದಿ ನೀರು ಹಂಚಿಕೆ ವಿವಿವಾದಕ್ಕೆ ಸಂಬಂಧಿಸಿದಂತೆ ಇದೇ ಆಗಷ್ಟ್ 20 ರಂದು ನ್ಯಾಯಧಿಕರಣದ ತೀರ್ಪು ಹೊರ ಬೀಳುವ ಸಾಧ್ಯತೆ ಇದೆ. ಒಂದು ವೇಳೆ ಮಹಾದಾಯಿ ತೀರ್ಪು ವ್ಯತಿರಿಕ್ತವಾಗಿ ಬಂದರೆ ದಯಾಮರಣ ಕೋರಿ ಧರಣಿ ಮಡೆಸುವುದಾಗಿ ರೈತ ಸೇನಾ ಕರ್ನಾಟಕ ಹೇಳಿದೆ. ರೈತ ಸೇನಾ ಕರ್ನಾಟಕ ಸಂಘದ ಕೋಶಾಧ್ಯಕ್ಷ ಎಸ್ ಬಿ ಜೋಗಣ್ಣವರ ನೇತೃತ್ವದಲ್ಲಿ ಹೊರಟ 30ಕ್ಕೂ ಅಧಿಕತ ಪ್ರತಿಭಟನಾಕಾರರು ಬೆಳಗಿನ ಜಾವ ೬ ಗಂಟೆಗೆ ಬೆಂಗಳೂರು ತಲುಪಿದ್ದಾರೆ. ನಾಳೆಯಿಂದ ಬೆಂಗಳೂರು ಪ್ರಿಡಂ ಪಾರ್ಕಿನಲ್ಲಿ ಧರಣಿ ಆರಂಭಿಸಲಿದ್ದಾರೆ. ಮಹದಾಯಿ ತೀರ್ಪು ಬರುವವರೆಗೂ ಧರಣಿ ನಡೆಸಲಿರೋ ರೈತ ಹೋರಾಟಗಾರರು, ಎಪ್ರಿಲ್ ೨೦ ರಂದು ಬರುವ ನ್ಯಾಯಧಿಕರಣ ತೀರ್ಪಿನ ನಂತರ ದಯಾಮರಣಕ್ಕೆ ರಾಷ್ಟ್ರಪತಿಗಳಿಗೆ ಮನವಿ ಮಾಡಲಿದ್ದಾರೆ. ಮಹದಾಯಿ ನದಿ ಅಚ್ಚಕಟ್ಟು ಪ್ರದೇಶಕ್ಕೆ ಅವಶ್ಯವಿರುವ 7.56 ಟಿ.ಎಂ.ಸಿ ನೀರು ಬರುವ ಭರವಸೆ ದೊರೆತರೆ ಧರಣಿ ಕೈ ಬಿಡುವುದಾಗಿ ರೈತ ಸೇನಾ ತಿಳಿಸಿದೆ.